Ad Widget

ನ.18 ರಂದು ಕಡಬ ತಾಲೂಕು ಕಚೇರಿ ಮುಂಭಾಗ “ಬೃಹತ್ ಹಕ್ಕೊತ್ತಾಯ ಸಭೆ”

ಮಲೆನಾಡು ಜನಹಿತ ರಕ್ಷಣಾ ವೇದಿಕೆ(ರಿ.) ದಕ್ಷಿಣ ಕನ್ನಡ ಹಾಗೂ ಕಡಬ ತಾಲೂಕು ಅಭಿವೃದ್ಧಿ, ರೈತ, ಕೃಷಿ, ಕಾರ್ಮಿಕರ ಹೋರಾಟ ಸಮಿತಿ ಇವುಗಳ ಸಹಯೋಗದೊಂದಿಗೆ ನವೆಂಬರ್ 18 ಮಂಗಳವಾರದಂದು ಬೆಳಿಗ್ಗೆ 10:30ಕ್ಕೆ ಕಡಬ ತಾಲೂಕು ಕಚೇರಿಯ ಮುಂಭಾಗದಲ್ಲಿ “ಬೃಹತ್ ಹಕ್ಕೊತ್ತಾಯ ಸಭೆ” ನಡೆಯಲಿದ್ದು, “ಸಾಗುವಳಿ ಚೀಟಿ ನೀಡಿ ಹಲವಾರು ವರ್ಷಗಳು ಕಳೆದರೂ ಪ್ಲಾಟಿಂಗ್ ಆಗದೇ ಇರುವುದರಿಂದ ಜಂಟಿ ಸರ್ವೇ ನಡೆಸಿ ಪ್ಲಾಟಿಂಗ್ ಮಾಡುವುದು, ಆನೆ ಕಾರಿಡಾರ್ ಕಂದಕ ತೆರೆದು ಆನೆಗಳು ಹಾಗೂ ಇನ್ನಿತರ ಕಾಡು ಪ್ರಾಣಿಗಳು ಊರಿಗೆ ಬರದಂತೆ ತಡೆಯುವುದು, ಸುಳ್ಳು ಆದೇಶಗಳನ್ನು ಹೊರಡಿಸಿ ಅರಣ್ಯ ಇಲಾಖೆಯವರು ಬಡ ರೈತರು ಹಾಗೂ ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸದಂತೆ ಹಾಗೂ ಕೃಷಿನಾಶ ಮಾಡಿದಂತೆ ತಡೆಯುವುದು ಹಾಗೂ ಆರು ವರ್ಷಗಳ ಹಿಂದೆ ಪಟ್ಟಣ ಪಂಚಾಯತ್ ಆದ ನಂತರವೂ ಈ ಭಾಗದ ಕಡಬ, ಕುಟ್ರುಪಾಡಿ, ನೆಕ್ಕಿಲಾಡಿ, ಎಡಮಂಗಲ ಗ್ರಾಮಗಳ ಬಡ ಕೃಷಿ ಕೂಲಿ ಕಾರ್ಮಿಕರು ವಾಸವಿರುವ ಜಾಗವನ್ನು ಅಕ್ರಮ-ಸಕ್ರಮ ಮಾಡುವ ಕುರಿತು” ಈ “ಬೃಹತ್ ಹಕ್ಕೊತ್ತಾಯ ಸಭೆ” ನಡೆಯಲಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಹಾಗೂ ಕಡಬ ತಾಲೂಕು ಅಭಿವೃದ್ಧಿ, ರೈತ, ಕೃಷಿ, ಕಾರ್ಮಿಕರ ಹೋರಾಟ ಸಮಿತಿಯ ಸಯ್ಯದ್ ಮೀರಾ ಸಾಹೇಬ್ ರವರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading