Ad Widget

ಸರಕಾರಿ ಶಾಲೆ ಬಲವರ್ಧನೆಗೆ ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲರ ವಿಶೇಷ ಕಾಳಜಿ – ಕ್ಯಾಂಪ್ಕೋ ಸಾಮಾನ್ಯ ಉತ್ತಮ ನಿಧಿ ಯೋಜನೆಯಲ್ಲಿ ಕೋಲ್ಚಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಲಕ್ಷ ಅನುದಾನ

ಸುಳ್ಯ ತಾಲೂಕು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರ್ ಇಲ್ಲಿ ಆಂಗ್ಲ ಮಾಧ್ಯಮ ತರಗತಿಯ ಮಕ್ಕಳಿಗೆ ಕುಳಿತುಕೊಳ್ಳಲು ಆಕರ್ಷಣೀಯ ಪೀಠೋಪಕರಣ ಖರೀದಿಸಲು ಕ್ಯಾಂಪ್ಕೋ ಸಂಸ್ಥೆ ಸಾಮಾನ್ಯ ಉತ್ತಮ ನಿಧಿ ಯೋಜನೆ(Camco Good Found)ಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಇವರ ಮುತುವರ್ಜಿಯಲ್ಲಿ 1 ಲಕ್ಷ ಅನುದಾನವನ್ನು ನೀಡಿರುತ್ತಾರೆ.
ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುದರ್ಶನ್ ಪಾತಿಕಲ್ಲು ಪ್ರತಿಕ್ರಿಯಿಸಿ “ಮಧ್ಯಮ ವರ್ಗದ ಅಡಿಕೆ ಕೃಷಿಕರ ಅತೀ ಹೆಚ್ಚಿನ ಮಕ್ಕಳು ನಮ್ಮ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆ ಮಕ್ಕಳು ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂಬ ಕಾಳಜಿಯಿಂದ ಶಾಲೆಯ ಬಲವರ್ಧನೆಗೆ ಮುತುವರ್ಜಿ ವಹಿಸಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷನಾದ ನನಗೆ ತಾವೇ ಸ್ವತಃ ಕರೆ ಮಾಡಿ ಕ್ಯಾಂಪ್ಕೋ ಆಡಳಿತ ಮಂಡಳಿಗೆ ಮನವಿ ನೀಡುವಂತೆ ಸಲಹೆ ನೀಡಿ ಅನುದಾನ ಸರಕಾರಿ ಶಾಲೆಗೆ ಬರುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿರುವ ಕೃಷ್ಣಪ್ರಸಾದ್ ಮಾಡ್ತಿಲ ಅವರಿಗೆ ಸರ್ಕಾರಿ ಶಾಲೆಯ  ಬಗ್ಗೆ ಇರುವ ಕಾಳಜಿ ಮತ್ತು ಸಹಕಾರ ಶ್ಲಾಘನೀಯ. ಮುಂದೆ ಆಕರ್ಷಣೀಯ ತರಗತಿ ಕೊಠಡಿಗಳಿಂದ ಶಾಲೆಯ ದಾಖಲಾತಿ ಹೆಚ್ಚಲಿದೆ” ಎಂದು ಹರ್ಷ ವ್ಯಕ್ತಪಡಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading