Ad Widget

ಜ್ಞಾನಗಂಗಾ ನಮ್ಮೂರಿನ ಮಾದರಿ ಜ್ಞಾನದೇಗುಲ – ✒️ಪೂರ್ಣಿಮಾ ಚೊಕ್ಕಾಡಿ

ಬೆಳ್ಳಾರೆಯ ಹಚ್ಚ ಹಸಿರಿನ ಪರಿಸರ ಮಧ್ಯದಲ್ಲಿ ಶಿಸ್ತು  ಚೆಂದ   ಸ್ವಚ್ಛತೆಗೆ ಮಾದರಿಯಾಗಿ  ಎಲ್ಲರನ್ನು ಆಕರ್ಷಿಸುವ‌ ನಮ್ಮ ಶಾಲೆ ಜ್ಞಾನಗಂಗಾ ಬೆಳ್ಳಾರೆ.  1998 ರಲ್ಲಿ ಪ್ರಾರಂಭವಾದ ಸಿಬಿಎಸ್ಇ ಶಿಕ್ಷಣವು ಪ್ಲೇ ಗ್ರೂಪಿನಿಂದ ಹತ್ತನೇ ತರಗತಿಯವರೆಗೆ ಶಿಕ್ಷಣ ನೀಡುತ್ತದೆ. ಈ ಶಾಲೆಯು ಅದರದೇ ಆದಂತಹ ಘನತೆಯನ್ನು ಎತ್ತಿ ತೋರಿಸುತ್ತಾ ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲ, ಪೋಷಕರಿಗೆ ಅಮ್ಮನ ಮಡಿಲು, ಶಿಕ್ಷಕ ವೃಂದದವರಿಗೆ ಜೀವನದ ಆಸರೆಯಾಗಿ, ಬೆಳೆದು ನಿಂತಿರುವ ಶಾಲೆ. ಪ್ರಾರಂಭದಲ್ಲಿ ಈ ಶಾಲೆ ಕಡಿಮೆ ಅಂಕೆಯ  ಮಕ್ಕಳನ್ನು ಕಂಡರೂ ಶಿಕ್ಷಣದ ಹಾದಿಯಲ್ಲಿ ಸಾಧನೆಯನ್ನು ತೋರುತ್ತ ಹಂತ ಹಂತವಾಗಿ ಬೆಳೆಯುತ್ತಾ ಇದೀಗ 27ನೇ ವರ್ಷಕ್ಕೆ ಕಾಲಿಟ್ಟ ಅದೆಷ್ಟು ಸಾವಿರಾರು ಮಕ್ಕಳಿಗೆ  ವಿದ್ಯಾರ್ಜನೆಯನ್ನು  ನೀಡಿ ವಿದ್ಯಾ ಸಂಸ್ಥೆಯನ್ನು ಉಳಿಸಿ ಬೆಳೆಸಿರುವ ಕೀರ್ತಿ ನಮ್ಮ ಶಾಲೆಯ  ಮುಖ್ಯಸ್ಥರಾದ ಉಮೇಶ್ ಸರ್ ಹಾಗೂ  ಶಾಲೆಯ ಪ್ರಾಂಶುಪಾಲರಾದ ದೇಚಮ್ಮ ಇವರದು.
ಪ್ರಾಂಶುಪಾಲರ ಪರಿಶ್ರಮ ಹಾಗೂ ಮಕ್ಕಳ ಮೇಲಿನ ಪ್ರೀತಿ ವಾತ್ಸಲ್ಯ ಎಲ್ಲವೂ ಸಂಸ್ಥೆಯ  ಮುನ್ನಡೆಗೆ ಕಾರಣವಾಗಿದೆ . ಮುಖದಲ್ಲಿ ಗಾಂಭೀರ್ಯತೆ ಇದ್ದರೂ ಅದೆಷ್ಟೋ ಸಮಸ್ಯೆ ಇದ್ದರೂ ಸಾವಿರಾರು ಆಲೋಚನೆಗಳಿದ್ದರೂ  ನಗುಮುಖದಿಂದ ಶಾಲಾ ಮಕ್ಕಳನ್ನಾಗಲಿ, ಶಿಕ್ಷಕರನ್ನಾಗಲಿ, ಸಹೋದ್ಯೋಗಿಗಳನಾಗಲಿ ಪ್ರೀತಿಯಿಂದ ಮಾತನಾಡಿಸಿ ಬರಮಾಡಿಕೊಳ್ಳುವರು.
ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ   ವಿಷಯದಲ್ಲಿ ಶಿಸ್ತು ಕ್ರಮ ನೀಡಿದರೂ ಪ್ರತಿಯೊಂದು ಮಕ್ಕಳನ್ನು ತನ್ನ ಮನೆಯ ಮಕ್ಕಳಂತೆ  ನೋಡಿಕೊಳ್ಳುವರು. ಹಾಗೆ ತನ್ನ ವೈಯಕ್ತಿಕ ಸಮಸ್ಯೆಗಳನ್ನೆಲ್ಲಾ ಬದಿಗಿಟ್ಟು ಶಾಲೆಯೇ ನನ್ನ  ಕುಟುಂಬ ಎಂಬ ಭಾವನೆಯಿಂದ ಖುಷಿಯಿಂದ ಕರ್ತವ್ಯ ಮಾಡುತ್ತಾ ಶಿಕ್ಷಕರಿಗೆ ಸ್ಫೂರ್ತಿ ನೀಡುವರು.

ಶಿಕ್ಷಣ ಪ್ರಬಲ ಅಸ್ತ್ರ ಇದು ಜಗತ್ತನ್ನೆ ಬದಲಾಯಿಸಬಹುದು. ನನ್ನ ಶಾಲೆ! ನಾನು ಕಟ್ಟಿಸಿದ ಶಾಲೆ ಎಂಬ ಅಹಂ ಇಲ್ಲದೆ ಸರಳತೆಯನ್ನು ಮಾದರಿಯನ್ನಾಗಿಸಿರುವ ನಮ್ಮ ಶಾಲೆಯ ಮುಖ್ಯಸ್ಥರು.ಗ್ರಾಮೀಣ ಮಕ್ಕಳಿಗೆ ನಮ್ಮ ಗ್ರಾಮೀಣ ಭಾಗದಲ್ಲಿ ಒಂದು ಉತ್ತಮವಾದ ಶಿಕ್ಷಣವನ್ನು ಒದಗಿಸಬೇಕೆಂಬ ಇವರ ಹಂಬಲವು ಶಾಲೆಯ ಏಳಿಗೆಗೆ ಕಾರಣವಾಯಿತು. ಶಾಲೆಗೆ ಬೇಕಾಗಿರುವ ಎಲ್ಲಾ ಸವಲತ್ತು ನೀಡಿ, ಉತ್ತಮ ಶಿಕ್ಷಣ ನೀಡುವಲ್ಲಿ  ಯಶಸ್ವಿಯಾಗಿದೆ.  ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿ ತಮ್ಮ ಮಕ್ಕಳು ತಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿದ ಗಿಟಾರ್, ಡ್ರಮ್ಸ್ , ಕಿಬೋರ್ಡ್, ಭರತನಾಟ್ಯ, ಡ್ರಾಯಿಂಗ್  ಇತರೆ ತರಗತಿಗಳನ್ನು ಒದಗಿಸುವ ವ್ಯವಸ್ಥೆಯನ್ನು ನೀಡುವುದರ ಜೊತೆಗೆ  ಹೊರ ಊರಿನ ಮಕ್ಕಳು ನಮ್ಮ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣ ಪಡೆದುಕೊಳ್ಳಲ್ಲಿ ಎನ್ನುವ ಉದ್ದೇಶವಾಗಿಟ್ಟುಕೊಂಡು ಸುಸಜ್ಜಿತವಾದ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಿರುತ್ತಾರೆ.

ಪುತ್ತೂರು, ಸುಳ್ಯ , ಸುಬ್ರಹ್ಮಣ್ಯ, ಕಡಬ ಸೇರಿದಂತೆ ಹಲವಾರು ಕಡೆಯಿಂದ  ಮಕ್ಕಳು ಸುರಕ್ಷಿತವಾಗಿ  ಬಂದು ಶಾಲೆಗೆ ಸೇರುವಂತೆ ವ್ಯವಸ್ಥಿತವಾದ ಬಸ್ ವ್ಯವಸ್ಥೆಯು ನೀಡಿರುತ್ತಾರೆ.

  ಹಾಗೇಯೆ ಪೋಷಕರು ತನ್ನ ಮಕ್ಕಳು ಈ ಶಾಲೆಯಲ್ಲಿ ಸುರಕ್ಷಿತ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ,ಜೀವನ ಮೌಲ್ಯವನ್ನು ಕಲಿಯುತ್ತಾರೆಂದು  ಎರಡರಿಂದ ಮೂರು ವರ್ಷ ಪುಟ್ಟ ಕಂದಮ್ಮಗಳನ್ನು ಶಾಲೆಯ ಮಡಿಲಿಗೆ ಸೇರಿಸುವವರು. ಹಾಗೆ ಶಿಕ್ಷಕರು ನಮ್ಮ ಮಕ್ಕಳಂತೆ ಅದೆಷ್ಟೋ ತಾಳ್ಮೆ ಪ್ರೀತಿ ಸಹನೆಯನ್ನು ಕೂಡಿಕೊಂಡು ಅಳುತ್ತಾ ಅಳುತ್ತಾ ಬರುವ ಮಕ್ಕಳನ್ನು ಸಮಾಧಾನ ಮಾಡಿ ತರಗತಿಯನ್ನು ಶಾಂತಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಚಿಲಿಪಿಲಿಯಂತೆ ತರಗತಿಯಲ್ಲಿ ಓಡಾಡುವ ಮಕ್ಕಳನ್ನು ಶಿಸ್ತು ಬುದ್ಧಿ ವಿದ್ಯೆ ಸಮಯ  ಪ್ರಜ್ಞೆಯನ್ನು ತಿಳಿಸುತ್ತಾ ಹಂತ ಹಂತವಾಗಿ ಮುಂದಿನ ತರಗತಿಗೆ ತೇರ್ಗಡೆಯನ್ನು ಮಾಡುತ್ತ ಹತ್ತನೇ ತರಗತಿಯಲ್ಲಿ ತನ್ನ ಉತ್ತಮ ಅಂಕಗಳೊಂದಿಗೆ  ಫಲಿತಾಂಶವನ್ನು ತರಿಸುವಲ್ಲಿ ಶಿಕ್ಷಕರ ಪಾತ್ರವು ಮುಖ್ಯವಾಗಿದೆ.  ವಿಶೇಷವಾಗಿ ಶಾಲಾ ಪ್ರಾರಂಭದ ದಿನದಿಂದ ಹಿಡಿದು ಈವರೆಗೂ ಸೇವೆ ಸಲ್ಲಿಸುತ್ತಿರುವ  ಪ್ರಾಂಶುಪಾಲರು ಹಾಗು  ಸಹ ಶಿಕ್ಷಕಿಯಾದ  ಶ್ರೀಮತಿ ಸುಚಿತ್ರ  ಇವರ ತಾಳ್ಮೆ , ನಿಸ್ವಾರ್ಥ ಸೇವೆಯು ನಿಜವಾಗಿಯು ಶ್ಲಾಘನೀಯ ಎಲ್ಲರಿಗೂ ಮಾದರಿಯಾಗಿದೆ.

ಮಕ್ಕಳಿಗೆ ಶಿಕ್ಷಣ ಕೇಂದ್ರ ನಿರುದ್ಯೋಗಿಗಳಿಗೆ ಉದ್ಯೋಗದಾತವಾಗಿರುವಂತ ಶಾಲೆಯ  ಮುಖ್ಯಸ್ಥರ   ಜೀವನದ  ಕನಸು  ನನಸಾಗುತ್ತಾ ಸಾಗಲಿ.ಇನ್ನು ಮುಂದಕ್ಕೂ ಇವರ ಶಿಕ್ಷಣ ಸಂಸ್ಥೆ ನೀಡುವ  ಶಿಕ್ಷಣ ಉತ್ತಮ ಹಾಗೂ ಉನ್ನತ ಶಿಕ್ಷಣಕ್ಕೆ ಹಾದಿ ತೋರುತ್ತಾ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ವಿದ್ಯಾರ್ಜನೆ ಪಡೆಯುವಂತಾಗಿರಲಿ.

ಪೂರ್ಣಿಮಾ ಚೊಕ್ಕಾಡಿ
ಸಹಶಿಕ್ಷಕಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading