Ad Widget

ಬಿಳಿನೆಲೆ : ಜಂಟಿ ಸರ್ವೆ ಕುರಿತಂತೆ ಗ್ರಾಮಸ್ಥರ ಸಭೆ

ಕಡಬ ತಾಲೂಕಿನ ಬಿಳಿನೆಲೆ ಭಾಗದ ಪ್ರಮುಖ ಸಮಸ್ಯೆಯಾಗಿದ್ದ ಜಂಟಿ ಸರ್ವೆಯ ಕುರಿತು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು  ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದ ದಿನೇಶ್ ರವರು ವಹಿಸಿ, ಜಂಟಿ ಸರ್ವೆಯ ವಿಚಾರವಾಗಿ ಪ್ರಾಸ್ತಾವಿಕ ಮಾಹಿತಿಯನ್ನು ನೀಡಿದರು. 
ಈ ಬಗ್ಗೆ ಹೋರಾಟದ ಪ್ರಮುಖರಾದ ಅಭಿಲಾಷ್ ಪಿ.ಕೆ ನೂಜಿಬಾಳ್ತಿಲರವರು  ಗ್ರಾಮಸ್ಥರಿಗೆ ಜಂಟಿ ಸರ್ವೆಯ ಕುರಿತಂತೆ  ಸವಿಸ್ತಾರವಾಗಿ ವಿಚಾರ ಮಂಡಿಸಿದರು. ಜಂಟಿ ಸರ್ವೆಯ ಕುರಿತಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿ ಜಂಟಿ ಸರ್ವೇಯು ಪ್ರಾರಂಭ ಆಗುವಲ್ಲಿ ಕಾರಣಕರ್ತರಾದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲೂಕು ಅಧ್ಯಕ್ಷರಾಗಿರುವ ಸುಧೀರ್ ಕುಮಾರ್ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು. ಹಾಗೂ ಈ ಜಂಟಿ ಸರ್ವೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸಲು ಬರುವ ಎಲ್ಲಾ ಅಧಿಕಾರಿ ವರ್ಗಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ  ಜಂಟಿ ಸರ್ವೆ ಹೋರಾಟ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕಳಿಗೆ ಮಾತನಾಡಿ ಜಂಟಿ ಸರ್ವೆಯ ಕುರಿತಂತೆ ಸಾರ್ವಜನಿಕರು ವ್ಯಕ್ತಪಡಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.   ಹಾಗೂ ಜಂಟಿ ಸರ್ವೆಯ ಕುರಿತಾಗಿ ಆದೇಶ ಹೊರಡಿಸಲು ಸಹಕರಿಸಿದ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. 
ಈ ಸಭೆಯಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿರುವ ಶಿವಶಂಕರ್ ಬಿಳಿನೆಲೆ, ಸದಸ್ಯರಾದ ಸತೀಶ್ ಕಳಿಗೆ, ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಹರಿಶ್ಚಂದ್ರ ಕಳಿಗೆ ಹಾಗೂ ಕಾರ್ಯದರ್ಶಿಗಳಾದ ಮನೋಜ್ ಮದೆಪರ್ಲ, ಸದಸ್ಯರಾದ ಭವ್ಯ ಚಿದ್ಗಲ್ ಹಾಗೂ ಶ್ರೀಕಲರವರು ಉಪಸ್ಥಿತಿ ಇದ್ದರು.
ಪ್ರದೀಪ್ ಕಳಿಗೆ ಸ್ವಾಗತಿಸಿ, ಮನೋಜ್ ಮದೆಪರ್ಲ  ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading