Ad Widget

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸ್ಪರ್ಧೆಗಳಿಗೆ ಆಹ್ವಾನ

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನ.09 ರಂದು ವಳಲಂಬೆ ದೇವಸ್ಥಾನದ ವಠಾರದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ.

ಪ್ರಾಥಮಿಕ ಶಾಲಾ ವಿಭಾಗ : ಕನ್ನಡ ಗೀತೆ ಗಾಯನ, ಕವಿ-ಸಾಹಿತಿಗಳ ಹೆಸರುಗಳನ್ನು ಬರೆಯುವುದು, ರಾಷ್ಟ್ರಧ್ವಜದ ಚಿತ್ರ ಬಿಡಿಸುವುದು.
ಪ್ರೌಢಶಾಲಾ ವಿಭಾಗ : ಕನ್ನಡ ಗೀತೆ ಗಾಯನ, ಕವಿ-ಸಾಹಿತಿಗಳ ಹೆಸರುಗಳನ್ನು ಬರೆಯುವುದು, ಚೀಟಿ ಎತ್ತಿ ಭಾಷಣ.
ಪದವಿಪೂರ್ವ/ಪದವಿ ವಿಭಾಗ : ಸ್ಥಳದಲ್ಲಿ ಕಥೆ ರಚನೆ, ಕವನ ರಚನೆ, ಚೀಟಿ ಎತ್ತಿ ಭಾಷಣ.
ಸಾರ್ವಜನಿಕ ವಿಭಾಗ : ಗೀತೆ ಗಾಯನ, ಒಬ್ಬ ಕವಿಯ ಪರಿಚಯ ಮಾಡುವುದು, ಕವಿತೆ ರಚನೆ.

ಸ್ಪರ್ಧೆಗಳು ನ.09 ಆದಿತ್ಯವಾರದಂದು ಬೆಳಿಗ್ಗೆ 9:30 ರಿಂದ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಪಂಜ ಹೋಬಳಿಯ ಗ್ರಾಮಗಳಾದ ಗುತ್ತಿಗಾರು, ನಾಲ್ಕೂರು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಕೂತ್ಕುಂಜ, ಮುರುಳ್ಯ, ಪಂಬೆತ್ತಾಡಿ ಹಾಗೂ ಪಕ್ಕದ ಸುಳ್ಯ ಹೋಬಳಿಯ ಗ್ರಾಮಗಳಾದ ಕಲ್ಮಡ್ಕ, ಕಳಂಜ, ಬಾಳಿಲ, ಅಮರ ಮುಡ್ನೂರು, ಅಮರ ಪಡ್ನೂರು, ನೆಲ್ಲೂರು ಕೆಮ್ರಾಜೆ ಮತ್ತು ಮಡಪ್ಪಾಡಿ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಯೋಗೀಶ್ ಹೊಸೊಳಿಕೆ 9449576632 ರವರನ್ನು ಸಂಪರ್ಕಿಸುವಂತೆ ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading