Ad Widget

ಸುಳ್ಯ ತಾಲೂಕು ಮಟ್ಟದ 14ರ ವಯೋಮಾನದ ಕ್ರೀಡಾಕೂಟದಲ್ಲಿ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ರೋಟರಿ ವಿದ್ಯಾಸಂಸ್ಥೆ ಮಿತ್ತಡ್ಕ ಸುಳ್ಯ ಇದರ ಆಶ್ರಯದಲ್ಲಿ ನ.03 ಮತ್ತು 04ರಂದು ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿ ಹಾಗೂ ಶಾಲಾ ಸಮಗ್ರ ಪ್ರಶಸ್ತಿಯನ್ನು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆ ಪಡೆದುಕೊಂಡಿದೆ.
ಚಂದನ್ 8ನೇ ತರಗತಿ 80 ಮೀ  ಹಡಲ್ಸ್ ಪ್ರಥಮ, ಎತ್ತರ ಜಿಗಿತ ಹಾಗೂ ಉದ್ದ ಜಿಗಿತ, ರಿಲೇ, ದ್ವಿತೀಯ, ಸ್ಥಾನದೊಂದಿಗೆ  ವೈಯಕ್ತಿಕ ಪ್ರಶಸ್ತಿ ಗಳಿಸಿದನು.
ಲಕ್ಷಜಿತ್ ರೈ 8ನೇ ಗುಂಡೆಸೆತ ಪ್ರಥಮ, ಚಕ್ರ ಎಸೆತ ಹಾಗೂ ರಿಲೇ ದ್ವಿತೀಯ, ಹಿಷಾ ಹರ್ಷ 8ನೇ, 80 ಮೀಟರ್ ಹರ್ಡಲ್ಸ್   ದ್ವಿತೀಯ, ಕೃತಿ 8ನೇ ಎತ್ತರ ಜಿಗಿತ ತೃತೀಯ, ಸಾನ್ವಿ ಎ.ಜೆ ಎಂಟನೇ 80 ಮೀಟರ್  ಹರ್ಡಲ್ಸ್  ತೃತೀಯ, ಪ್ರಿನ್ಸಿಟಾ ಲಿಯೋನ ಡಿ’ಸೋಜ ಎಂಟನೇ, ಮಹಮ್ಮದ್ ಮುಸ್ತಫ ಎಂಟನೇ, ಮಹಮ್ಮದ್  ರೌಶನ್ ಏಳನೇ, ಮೌನ ಏಳನೇ, ತಸ್ವಿ ಎಂಟನೇ ನೇ, ಆಯಿಷತ್ ನಹೀಮ ಎಂಟನೇ, ರಿಲೇ ದ್ವಿತೀಯ  ಬಹುಮಾನ ಪಡೆದರು.
17ರ ವಯೋಮಾನದ ವಿಭಾಗದಲ್ಲಿ ವಮಿಕ ಎಸ್.ರೈ ಒಂಬತ್ತನೇ ಈಟಿ ಎಸೆತ ಪ್ರಥಮ, ಸಾರಿಕಾ ಹತ್ತನೇ, ಚಕ್ರ ಎಸೆತ ದ್ವಿತೀಯ, ಧನ್ವಿ ಕೆ ಹತ್ತನೇ ತ್ರಿವಿಧ ಜಿಗಿತ ದ್ವಿತೀಯ, ಖುಷಿ ಒಂಬತ್ತನೇ ಗುಂಡೆಸೆತ ದ್ವಿತೀಯ, ತನುಶ್ ರಾಜ್ ಸಾಲಿಯಾನ್ ಹತ್ತನೇ 100 ಮೀಟರ್ ತೃತೀಯ, ಅಕ್ಷರ್ ಹತ್ತನೇ ಉದ್ದ ಜಿಗಿತ ತೃತೀಯ ಸ್ಥಾನ ಪಡೆದರು. ಚಂದನ್, ಲಕ್ಷಜಿತ್ ರೈ, ಹಿಶಾ ಹರ್ಷ, ವಮಿಕ ರೈ, ಸಾರಿಕಾ ಕೆ.ಎಸ್, ಧನ್ವಿ.ಕೆ, ಖುಷಿ.ಸಿ ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ ಓಲ್ವಿನ್  ಎಡ್ವರ್ಡ್ ಡಿ ಕುನ್ಹ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ, ಪುಷ್ಪವೇಣಿ ಹುದೇರಿ ಸಹಶಿಕ್ಷಕಿಯರಾದ ಚೇತನ,  ಜ್ಯೋತಿ ಜೆ ರೈ, ವಿದ್ಯಾ ಸರಸ್ವತಿ, ಹೇಮಾವತಿ ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading