Ad Widget

ವೈಭವದ ಮೆರವಣಿಗೆಯೊಂದಿಗೆ ಕುಕ್ಕೆಗೆ ಆಗಮಿಸಿದ ಬೆಳ್ಳಿರಥ

ಸುಬ್ರಹ್ಮಣ್ಯ ನವಂಬರ್ 5 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಡಾ.ಕುರುಂಜಿ ರೇಣುಕಾ ಪ್ರಸಾದ್ ಹಾಗೂ ಮನೆಯವರು ಕೊಡುಗೆಯಾಗಿ ನೀಡಿದ ಎರಡು ಕೋಟಿ ರೂಪಾಯಿ ವೆಚ್ಚದ ಬೆಳ್ಳಿ ರಥವು ಇಂದು ಬುಧವಾರ ಸಂಜೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿದೆ.
ರಥದೊಂದಿಗೆ ಬಂದಿರುವ ಕುರುಂಜಿ ಡಾ.ರೇಣುಕಾ ಪ್ರಸಾದ್ ರವರು ಹಾಗೂ ಮನೆಯವರು, ರಥಶಿಲ್ಪಿಗಳು, ಸುಳ್ಯ ಕೆ.ವಿ.ಜಿ ವಿದ್ಯಾಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು, ಊರ-ಪರವೂರ ನಾಗರಿಕರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಕ್ಷೇತ್ರಕ್ಕೆ ಆಗಮಿಸಿದ ಬೆಳ್ಳಿ ರಥವನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳು, ಮಾಸ್ಟರ್ ಪ್ಲಾನ್ ಸದಸ್ಯರು, ಅರ್ಚಕವರ್ಗದವರು ಹಾಗೂ ಸಿಬ್ಬಂದಿವರ್ಗದವರು ದೇವಳದ ಪರವಾಗಿ ಸ್ವಾಗತಿಸಿ ಬರಮಾಡಿಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading