Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಗುತ್ತಿಪೂಜೆ – ಇಂದು ಸುಳ್ಯಕ್ಕೆ ಆಗಮನ




ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರಿಂದ ಸುಮಾರು ಒಂದು ಕೋಟಿ ಮೌಲ್ಯದ ಬೆಳ್ಳಿರಥ ಸಮರ್ಪಣೆ ನ.10 ರಂದು ನಡೆಯಲಿದ್ದು ನ. 3 ರಂದು ಕೋಟೇಶ್ವರದಲ್ಲಿ ಗುತ್ತಿಪೂಜೆ ನಡೆಯಿತು.

ರಥ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ಶ್ರೀ ರಾಜಗೋಪಾಲ ಆಚಾರ್ಯರು ಬೆಳ್ಳಿರಥವನ್ನು ನಿರ್ಮಿಸಿದ್ದು. ನ. 03 ರಂದಯ ಗುತ್ತಿಪೂಜೆ ನೆರವೇರಿಸಿ ಡಾ. ರೇಣುಕಾಪ್ರಸಾದ್ ಕೆ.ವಿ. ಯವರಿಗೆ ಹಸ್ತಾಂತರಿಸಿದರು.‌ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಡಾ. ಜ್ಯೋತಿ ಆ‌ರ್. ಪ್ರಸಾದ್, ಶ್ರೀ ಮೌರ್ಯ ಆರ್. ಪ್ರಸಾದ್ ಕುರುಂಜಿ, ಡಾ. ಅಭಿಜ್ಞ ಗೋಕುಲ್, ಗೋಕುಲ್ ಹಾಗೂ ಅನೇಕ ಗಣ್ಯರು ಮತ್ತು ಭಗವದ್ಭಕ್ತರು ಉಪಸ್ಥಿತರಿದ್ದರು.

ನ 04 ರಂದು ಪೂರ್ವಾಹ್ನ ಗಂಟೆ 8.00ಕ್ಕೆ ಬೆಳ್ಳಿ ರಥಯಾತ್ರೆ ಆರಂಭಗೊಂಡು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಸಾಗಿ ಸಾಯಂಕಾಲ ಸುಳ್ಯದ ಪೈಚಾರಿನಿಂದ ಪೂರ್ಣಕುಂಭದ ಸ್ವಾಗತದೊಂದಿಗೆ ಸಿಂಗಾರಿಮೇಳ, ಭಜನಾ ತಂಡ ಹಾಗೂ ವಿವಿಧ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಗೆ ರಥ ಆಗಮಿಸಲಿದೆ. ನಂತರ ಅಮರ ಶ್ರೀ ಕಾಂತಮಂಗಲದ ಮೂಲಕ ಹಾದು ಹೋಗಿ ಶ್ರೀ ಕ್ಷೇತ್ರ ಗುತ್ಯಮ್ಮನ ಸನ್ನಿಧಿಯಲ್ಲಿ ರಾತ್ರಿ ತಂಗಲಿದೆ.
ನ. 05 ರಂದು ಬೆಳಿಗ್ಗೆ ಗಂಟೆ 9.00ಕ್ಕೆ ಕೆ.ವಿ.ಜಿ. ಪುತ್ಥಳಿ ಬಳಿಯಿಂದ ಬೆಳ್ಳಿರಥ ಯಾತ್ರೆ ವಿವಿಧ ವೈಧಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೊರಡುವುದು. ಬೆಳ್ಳಿರಥ ಯಾತ್ರೆಯ ಸಂದರ್ಭದಲ್ಲಿ ಹಾದು ಹೋಗುವ ವಿವಿಧ ಧಾರ್ಮಿಕ ಕ್ಷೇತ್ರಗಳ ಹಾಗೂ ವಿವಿಧ ಗ್ರಾಮಗಳ ಭಕ್ತರ ಸ್ವಾಗತದೊಂದಿಗೆ ವೈಭವದ ಬೆಳ್ಳಿರಥ ಯಾತ್ರೆ ಮುಂದುವರಿದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ. ನ. 09 ರಂದು ಸಂಜೆ ಗಂಟೆ 6.00 ರಿಂದ ಶುದ್ದಿಕಲಶ, ವಾಸ್ತುಪೂಜೆ, ವಾಸ್ತು ಬಲಿ ಮತ್ತು ರಕ್ಷೋಘ್ನ ಹೋಮ ನಡೆಯಲಿದೆ. ನ 10 ರಂದು ಬೆಳಿಗ್ಗೆ ಗಂಟೆ 7.00ರಿಂದ ಗಣಪತಿ ಹವನ, ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ಪೂರ್ಣಾಹುತಿಗೊಂಡು, ಪೂರ್ವಾಹ್ನ ಗಂಟೆ 11.00ಕ್ಕೆ ಡಾ. ರೇಣುಕಾ ಪ್ರಸಾದ್ ಕೆ.ವಿ., ಡಾ. ಜ್ಯೋತಿ ಆರ್. ಪ್ರಸಾದ್, ಮೌರ್ಯ ಆರ್. ಪ್ರಸಾದ್ ಕುರುಂಜಿ, ಡಾ. ಅಭಿಜ್ಞಾ ಗೋಕುಲ್ ಹಾಗೂ ಗೋಕುಲ್ ಅವರ ಉಪಸ್ಥಿತಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading