Ad Widget

ಸುಳ್ಯಕ್ಕೆ ಆಗಮಿಸಿದ ಬೆಳ್ಳಿರಥ – ಕುರುಂಜಿ ಕುಟುಂಬಸ್ಥರು ಸೇರಿದಂತೆ ಗಣ್ಯರಿಂದ ಸ್ವಾಗತ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ.ರೇಣುಕಾ ಪ್ರಸಾದ್ ಕೆ.ವಿ ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಕೋಟೇಶ್ವರದಲ್ಲಿ  ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ  ಸುಳ್ಯಕ್ಕೆ ಆಗಮಿಸಿದೆ.ಸುಳ್ಯದಲ್ಲಿ ಡಾ.ಚಿದಾನಂದ ಕೆ.ವಿ ಹಾಗೂ ಮನೆಯವರು, ಸುಳ್ಯದ ಗಣ್ಯರು, ಕೆವಿಜಿ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು, ಪ್ರಮುಖರು, ವಿದ್ಯಾರ್ಥಿಗಳು ನೂತನ ರಥವನ್ನು ಸ್ವಾಗತಿಸಿದರು.

ಸುಬ್ರಹ್ಮಣ್ಯದ ನಿಧಿ ಗೌಡ ಸಿಎ ಪರೀಕ್ಷೆಯಲ್ಲಿ ತೇರ್ಗಡೆ

ಸುಬ್ರಹ್ಮಣ್ಯದ ನಿಧಿ ಗೌಡರವರು ಸೆಪ್ಟೆಂಬರ್ 2025ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ನಡೆಸಿದ ಸಿಎ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಇವರು ಸುಬ್ರಹ್ಮಣ್ಯದ ದಿನೇಶ್.ಬಿ.ಎನ್ ಹಾಗೂ ಶ್ರೀಮತಿ ಭಾರತಿ ದಂಪತಿಗಳ ಪುತ್ರಿ.
Ad Widget

ನಾಳೆ(ನ.05) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಪೂರ್ವಭಾವಿ ಸಭೆ

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಸಿದ್ಧತೆಗಳ ಬಗ್ಗೆ ಪೂರ್ವಭಾವಿ ಸಭೆಯು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ನಾಳೆ(ನ.05) ಶ್ರೀ ದೇವಳದ ಸಭಾಂಗಣದಲ್ಲಿ ನಡೆಯಲಿದೆ.ಸಭೆಯಲ್ಲಿ ದಕ್ಷಿಣ ಕನ್ನಡ  ಜಿಲ್ಲೆಯ ಜಿಲ್ಲಾಧಿಕಾರಿಗಳು,...

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ರೈತ ಜಾಗೃತಿ ಜಾಥಾ” – ಜಾಥಾಕ್ಕೆ ಚಾಲನೆ ನೀಡಿದ ರವೀಂದ್ರ ಕುಮಾರ್ ರುದ್ರಪಾದ

ಅರಣ್ಯ ಇಲಾಖೆಯಿಂದ ಕೃಷಿಕರಿಗೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳು ಹಾಗೂ ಸಮಸ್ಯೆಗಳ ವಿರುದ್ಧ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಇಂದು(ನ.04) ಸುಬ್ರಹ್ಮಣ್ಯದಿಂದ ಬಲ್ಯದವರೆಗೆ “ರೈತ ಜಾಗೃತಿ ಜಾಥಾ” ನಡೆಯುತ್ತಿದ್ದು, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ರವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾಥಾಕ್ಕೆ...

ಪ್ರಜಾಧ್ವನಿ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಪ್ರಜಾಧ್ವನಿ ಕರ್ನಾಟಕ ವತಿಯಿಂದ ಸುಳ್ಯದ ಶಿವಕೃಪಾ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಶೋಕ ಎಡಮಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಧಾನ ಭಾಷಣ ಮಾಡಿದರು. ಅವರು ಮಾತನಾಡುತ್ತಾ, “ಕನ್ನಡ ಭಾಷೆಯ ಬೆಳವಣಿಗೆಯ ದರ ಈಗ ಶೇಕಡಾ 3.73 ರಷ್ಟು ಮಾತ್ರ ಇದ್ದು, ಅದು ಇನ್ನಷ್ಟು...

ಶೇಣಿ : ಶ್ರೀಕೃಷ್ಣ ಭಜನಾ ಮಂಡಳಿಯ ವಾರ್ಷಿಕೋತ್ಸವ – ತರಬೇತುದಾರ ಸಂತೋಷ್ ಕುಳ್ಳಾಜೆಯವರಿಗೆ ಸನ್ಮಾನ –
“ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ” – ಈಶ್ವರ್ ವಾರಣಾಶಿ

“ಶಾಲಾ ಮಕ್ಕಳು ಕೇವಲ ಪಠ್ಯ ಚಟುವಟಿಕೆಗಳಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಮುಖ್ಯವಲ್ಲ, ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ಭಜನೆಯಿಂದ ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯ” ಎಂದು ಪತ್ರಕರ್ತ ಈಶ್ವರ ವಾರಣಾಶಿ ಹೇಳಿದರು.ಇವರು ಶ್ರೀಕೃಷ್ಣ ಭಜನಾ ಮಂಡಳಿ ಶೇಣಿ ಇದರ ವಾರ್ಷಿಕೋತ್ಸವ ಮತ್ತು ಭಜನಾ ತರಬೇತುದಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನ.2ರಂದು ಸನ್ಮಾನ ನೆರವೇರಿಸಿ ಮಾತನಾಡಿದರು. ಎಂ.ಎಸ್.ಕೆ...

ದುರ್ಗಾಲಕ್ಷ್ಮೀ ಜಿ.ಸಿ ಗುತ್ತಿಗಾರು ಸಿಎ ಪರೀಕ್ಷೆಯಲ್ಲಿ ತೇರ್ಗಡೆ

ಕುಕ್ಕೆ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಮ್ ವಿದ್ಯಾರ್ಥಿನಿ ದುರ್ಗಾಲಕ್ಷ್ಮೀ ಜಿ.ಸಿ ಸೆಪ್ಟೆಂಬರ್ 2025ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ನಡೆಸಿದ ಸಿಎ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ಗುತ್ತಿಗಾರಿನ ಎಸ್.ಎಂ‌.ಎಸ್.ಜಿ‌. ಕಾಂಪ್ಲೆಕ್ಸ್ ನಲ್ಲಿ ಕಟ್ಲೇರಿ ಅಂಗಡಿ ನಡೆಸುತ್ತಿರುವಜಿ.ಚಂದ್ರಶೇಖರ ಹಾಗೂ ಶ್ರೀಮತಿ ಜಿ.ಸುಶೀಲ ದಂಪತಿಗಳ ಪುತ್ರಿ.

ಡಾ| ಕೆ.ವಿ ರೇಣುಕಾ ಪ್ರಸಾದ್ ದಂಪತಿಗಳಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಆಗಲಿರುವ ಬೆಳ್ಳಿ ರಥದ ನಿರ್ಮಾಣ ಕಾರ್ಯದಲ್ಲಿ ಸುಳ್ಯ ತಾಲೂಕಿನ ಮೂವರು ಯುವಕರು

ಅಮರ ಸುಳ್ಯದ ಶಿಲ್ಪಿ ಶಿಕ್ಷಣ ಕ್ರಾಂತಿಯ ಹರಿಕಾರ ದಿ| ಕುರುಂಜಿ ವೆಂಕಟ್ರಮಣ ಗೌಡರ ಪುತ್ರ ಡಾ| ಕೆ.ವಿ ರೇಣುಕಾ ಪ್ರಸಾದ್ ದಂಪತಿಗಳಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನ.10 ಬೆಳ್ಳಿರಥ ಸಮರ್ಪಣೆಯಾಗಲಿದ್ದು, ಈ ಬೆಳ್ಳಿ ರಥವು ರಥಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ.ಲಕ್ಷ್ಮಿನಾರಾಯಣ ಆಚಾರ್ಯರು ಹಾಗೂ ಅವರ ಪುತ್ರರಾದ ರಾಜಗೋಪಾಲ ಆಚಾರ್ಯರಿಂದ ನಿರ್ಮಾಣಗೊಂಡಿದ್ದು, ರಥ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಗುತ್ತಿಪೂಜೆ – ಇಂದು ಸುಳ್ಯಕ್ಕೆ ಆಗಮನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರಿಂದ ಸುಮಾರು ಒಂದು ಕೋಟಿ ಮೌಲ್ಯದ ಬೆಳ್ಳಿರಥ ಸಮರ್ಪಣೆ ನ.10 ರಂದು ನಡೆಯಲಿದ್ದು ನ. 3 ರಂದು ಕೋಟೇಶ್ವರದಲ್ಲಿ ಗುತ್ತಿಪೂಜೆ ನಡೆಯಿತು.ರಥ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ಶ್ರೀ ರಾಜಗೋಪಾಲ ಆಚಾರ್ಯರು ಬೆಳ್ಳಿರಥವನ್ನು ನಿರ್ಮಿಸಿದ್ದು....
error: Content is protected !!