Ad Widget

“ರಾಜ್ಯದಲ್ಲಿ ಸಿ.ಎಂ ಕುರ್ಚಿಗಾಗಿ ಪೈಪೋಟಿಯಿಂದ ಜನ ಪರದಾಡುತ್ತಿದ್ದಾರೆ…”

ಕುಕ್ಕೆಯಲ್ಲಿ ಬಿ.ವೈ.ವಿಜಯೇಂದ್ರ ಟೀಕೆ

ಸುಬ್ರಹ್ಮಣ್ಯ ನ.02 : “ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಆಡಳಿತವು ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದ್ದು, ಜನ ಪರದಾಡುತ್ತಿದ್ದಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಮಾಧ್ಯಮದವರೊಂದಿಗೆ  ಮಾತನಾಡಿದರು.
“ಕಳೆದ ತಿಂಗಳಿನಿಂದ ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿಗಳ ಕುರ್ಚಿಗಾಗಿ ಪೈಪೋಟಿ ಬಹಿರಂಗವಾಗಿ ನಡೆಯುತ್ತಿದೆ. ಕೇವಲ ಡಿ.ಕೆ.ಶಿವಕುಮಾರ್ ಅವರಷ್ಟೇ ಅಲ್ಲ, ನನಗೆ ಗೊತ್ತಿರುವ ಪ್ರಕಾರ ಏಳೆಂಟು ಜನ ಹಿರಿಯ ಸಚಿವರು ತಾವು  ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಎಂದು ವ್ಯಕ್ತಪಡಿಸುತ್ತಿದ್ದಾರೆ‌. ಹಾಗಾಗಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ಬಹಳ ಜೋರಾಗಿ ನಡೆಯುತ್ತಿದೆ. ಇದರ ಪರಿಣಾಮ ಆಡಳಿತ ಪಕ್ಷದ ಮೇಲೂ ಬೀಳುತ್ತಿದೆ. ಆಡಳಿತದ ಮೇಲೂ ಬೀಳುತ್ತಿದೆ. ರಾಜ್ಯದ ಜನರು ಕೂಡ ಪರದಾಡುತ್ತಿದ್ದಾರೆ. ನವೆಂಬರ್ ನವೆಂಬರ್ ಕ್ರಾಂತಿ ನವೆಂಬರ್ ಕ್ರಾಂತಿ ಎಂದು ಭಾರತೀಯ ಜನತಾ ಪಾರ್ಟಿಯವರು ಹೇಳಿರುವುದಲ್ಲ, ಸ್ವತಃ ಆಡಳಿತ ಪಕ್ಷದ ಸಚಿವರೇ ಹೇಳಿದ ಕಾರಣ ನಡೆಯುತ್ತಿದೆ. ಒಟ್ಟಾರೆ ಇದರ  ಪರಿಣಾಮವೇನೆಂದರೆ, ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಿ ಬರ್ತಾರೆ ಇದಕ್ಕಿಂತ ಹೆಚ್ಚಾಗಿ, ಅಭಿವೃದ್ಧಿಗಿಂತ ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ನಾಡಿನ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ” ಎಂದು ಅವರು ಟೀಕಿಸಿದರು.
“ಆರ್.ಎಸ್.ಎಸ್. ಗುರಿಯಾಗಿಸಿ ನಿಯಾಮಾವಳಿ ಬಿಗಿಗೊಳಿಸಿರುವ ಬಗ್ಗೆ ಸಂಘದ ಹಿರಿಯರು ಅಭಿಪ್ರಾಯ ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ್ ಖರ್ಗೆ ಅವರ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಉತ್ತರ ನೀಡಿದ್ದಾರೆ‌‌. ಅದರ ಬಗ್ಗೆ ಹೆಚ್ಚೇನು ಹೇಳುವುದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರೇ ಅದಕ್ಕೆ ಉತ್ತರ ನೀಡಲಿದ್ದಾರೆ” ಎಂದು ಪ್ರಶ್ನೆಗೆ ಅವರು ಉತ್ತರಿಸಿದರು.
ಚುನಾವಣೆಗೆ ಸದಾ ಸಿದ್ದರಿದ್ದೇವೆ : “ಬೆಂಗಳೂರಿನ ಮಹಾನಗರ ಪಾಲಿಕೆ ಚುನಾವಣೆ ಬಗ್ಗೆ ಈಗಾಗಲೇ ಪೂರ್ವ ತಯಾರಿ ಪ್ರಾರಂಭವಾಗಿದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಬಗ್ಗೆಯೂ ನಾವು ಪೂರ್ವ ತಯಾರಿಯನ್ನು ನಾವು ಸದ್ಯದಲ್ಲೇ ಮಾಡಲಿದ್ದೇವೆ. ಮುಂದಿನ ಚುನಾವಣೆಯನ್ನು ಬಿಜೆಪಿ ಎದುರಿಸಲು ಒಟ್ಟಾಗಿ ಸದಾ ಸಿದ್ದವಾಗಿದೆ‌‌” ಎಂದರು.
ಕಾಂಗ್ರೆಸ್ ಅನುದಾನ ನೀಡದೇ ಇರುವ ವಿರುದ್ಧ ಹೋರಾಟ : “ರಾಜ್ಯ ಸರಕಾರ ಅಭಿವೃದ್ಧಿಗೆ ಅನುದಾನ ನೀಡದೇ ಇರುವುದನ್ನು ಖಂಡಿಸಿ ಜನಾಕ್ರೋಶ ಯಾತ್ರೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ. ಮುಂದೆ ಬರುವ ತಿಂಗಳಲ್ಲಿ ಈ ಭ್ರಷ್ಟಾ ಕಾಂಗ್ರೆಸ್ ಸರಕಾರದ ವಿರುದ್ಧ, ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಯಾವ ರೀತಿಯ ಆಂದೋಲನ ಮಾಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಒಟ್ಟಾರೆ ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಕಳೆದ ಎರಡು ವರ್ಷದಲ್ಲಿ ಈ ನಾಡಿನ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಬರುವಾಗ ರೈತರ ಜೊತೆ ಮಾತನಾಡಿದೆ, ವಿಜಯನಗರದ ರೈತರು ಕೂಡ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ‌. ಕಳೆದ ವರ್ಷ ತುಂಗಾಭದ್ರ ಕ್ರಷ್ಟ್ ಗೇಟ್ ಮುಳುಗುತ್ತಿದ್ದ ಸಂದರ್ಭದಲ್ಲಿ ಅದನ್ನು ಅಲ್ಲಿನ ಬೋರ್ಡ್, ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡದ ಪರಿಣಾಮ ಆ ಭಾಗದ ರೈತರು ಇವತ್ತು ಎರಡನೇ ಬೆಳೆ ಬೆಳೆಯದ ಪರಿಸ್ಥಿತಿ ನಿರ್ಮಾಣ ಆಗಿದೆ, ಸಮಸ್ಯೆ ಉಂಟಾಗಿದೆ. ಭತ್ತದ ಬೆಳೆಗೆ ಪೂರಕವಾಗಿ ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿ ಯಡಿಯೂರಪ್ಪ ರವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ  ಕೆರೆಗಳಿಗೆ ನೀರು ತುಂಬುವ ಕೆಲಸ ಆಗಿತ್ತು. ಆದರೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಆದ ಬಳಿಕ ಕಳೆದ ಎರಡುವರೆ ವರ್ಷದಲ್ಲಿ ಯಾವುದೇ ಕೆರೆಗಳಿಗೆ ನೀರು ತುಂಬುವ ಕೆಲಸ ಆಗಿಲ್ಲ. ಅದರ ವಿರುದ್ಧವೂ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಕಳೆದ ಎರಡೂ ಮೂರು ದಿನಗಳಿಂದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ಮತ್ತು ಬಿಜಾಪುರ ಜಿಲ್ಲೆಯ ಕಬ್ಬು ಬೆಳೆಗಾರರು ಸರಿಯಾದ ಬೆಲೆ ಕೊಡಬೇಕು, ಮೂರು ಸಾವಿರ ಐದು ನೂರು ಕೊಡಬೇಕು ಎಂದು ಹೇಳಿ ರೈತರು  ವೈಜ್ಞಾನಿಕವಾಗಿ  ಒತ್ತಾಯ ಮಾಡುತ್ತಿದ್ದಾರೆ. ನಾನು ರಾಜ್ಯ ಸರಕಾರವನ್ನು ಮುಖ್ಯಮಂತ್ರಿ, ಸಚಿವರಿಗೆ ಒತ್ತಾಯಿಸುತ್ತೇನೆ, ತಡಮಾಡದೇ ಆ ಭಾಗದ ಕಬ್ಬು ಬೆಳೆಗಾರರು ಬೀದಿ ಗಿಳಿದು ಹೋರಾಟ ಮಾಡುತ್ತಿದ್ದಾರೆ, ಅವರಿಗೆ ರಾಜ್ಯ ಸರಕಾರ ಕ್ರಮವನ್ನು ಕೈಗೊಳ್ಳಬೇಕು ರೈತರಿಗೆ ತೃಪ್ತಿಯಾಗುವ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಮಾಡುತ್ತೇನೆ. ಒಟ್ಟಾರೆ ರಾಜ್ಯ ಸರಕಾರದ ವಿರುದ್ಧ ರೈತ ವಿರೋಧಿ, ಬಡವರ ವಿರೋಧಿ, ಅಭಿವೃದ್ಧಿ ಶೂನ್ಯ ಸರಕಾರ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ‌” ಎಂದರು.
“ಬಿಜೆಪಿ ಪಕ್ಷ ಸಂಘಟನೆ ಬಲಗೊಳಿಸಲು ದಿನ ದಿನಕ್ಕೆ ಬಲವಾಗುತ್ತಿದೆ. ಸದಸ್ಯತ್ವದಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ತಿರಂಗ ಯಾತ್ರೆಯಲ್ಲಿ ಎರಡನೇ ಸ್ಥಾನ, ಮನ್ ಕೀ ಬಾತ್ ನಲ್ಲಿ ಮೂರನೇ ಸ್ಥಾನದಲ್ಲಿದೆ. ಸಂಘಟನೆಯ ಬಲಗೊಳಿಸುವ ಕೆಲಸ ಮಾಡುತ್ತೇವೆ” ಎಂದರು.
ಬಿ.ವೈ. ವಿಜಯೇಂದ್ರ ಅವರು ಪತ್ನಿ ಜೊತೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮಹಾಪೂಜೆಯಲ್ಲಿ ಪಾಲ್ಗೊಂಡರು. ಆದಿಸುಬ್ರಹ್ಮಣ್ಯ ಕ್ಷೇತ್ರಕ್ಕೂ ಭೇಟಿ ನೀಡಿದರು.
ದೇವಸ್ಥಾನದ ಇ.ಒ ಅರವಿಂದ ಅಯ್ಯಪ್ಪ ಸುತಗುಂಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವ ಎಸ್.ಅಂಗಾರ, ಎಂ.ಎಲ್.ಸಿ. ಕಿಶೋರ್ ಕುಮಾರ್, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading