Ad Widget

ಕುಕ್ಕೆ ಸುಬ್ರಹ್ಮಣ್ಯ : ಬೆಳ್ಳಿರಥ ಸಮರ್ಪಣೆ – ಒಕ್ಕಲಿಗ ಗೌಡ ಸಂಘದ ವತಿಯಿಂದ ಪೂರ್ವಭಾವಿ ಸಭೆ

ಸುಬ್ರಹ್ಮಣ್ಯ ನ.02 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಕುರುಂಜಿ ಡಾ.ರೇಣುಕಾ ಪ್ರಸಾದ್ ಕುಟುಂಬದವರು ನೀಡಲಿರುವ ಬೆಳ್ಳಿ ರಥವು 05ರಂದು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದು, ಅದನ್ನು ಸ್ವಾಗತಿಸಲು ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿ ವತಿಯಿಂದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನವೆಂಬರ್ 01 ರಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಸಮಿತಿಯ ಅಧ್ಯಕ್ಷ ಡಾ. ಎ.ಎ ತಿಲಕ್ ವಹಿಸಿದ್ದರು.
ಸುಬ್ರಹ್ಮಣ್ಯದ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಮುಖಂಡರು ನಿವೃತ್ತ ವಿ.ಟಿ.ಯು ವಿಶೇಷ ಅಧಿಕಾರಿ ಡಾ. ಶಿವಕುಮಾರ್ ಹೊಸೊಳಿಕೆ ರಥ ಆಗಮಿಸುವ ಬಗ್ಗೆ ವಿವರವಾದ ಮಾಹಿತಿಗಳನ್ನು ಸಭೆಗೆ ನೀಡಿದರು.
ನವೆಂಬರ್ 05ರಂದು ಕುಕ್ಕೆಗೆ ಆಗಮಿಸುವ ಬೆಳ್ಳಿ ರಥವನ್ನು ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆಯಲ್ಲಿ ಕಡಬ ತಾಲೂಕು ವತಿಯಿಂದ ನೂರಾರು ಜನ ಸೇರಿ ಅದ್ದೂರಿಯಾಗಿ  ಸ್ವಾಗತಿಸುವುದೆಂದು ನಿರ್ಣಯಿಸಲಾಯಿತು.
ಅದಕ್ಕೂ ಮೊದಲು ರಥ ಆಗಮಿಸುವ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.
ಕಡಬ ತಾಲೂಕು ಅಲ್ಲದೆ ಅಕ್ಕಪಕ್ಕದ ಊರುಗಳ ಎಲ್ಲ ಭಕ್ತರು ಕಲ್ಲಾಜೆ ಸಮೀಪ ಸೇರುವುದೆಂದು ವಿನಂತಿಸಿಕೊಳ್ಳಲಾಯಿತು.
ಸಭೆಯಲ್ಲಿ ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಮುಖಂಡರುಗಳಾದ ಗೋಪಾಲ್ ಎಣ್ಣೆಮಜಲು, ಶಿವರಾಮ ಏನೆಕಲ್ಲು, ಉಮೇಶ ಹೊಸೊಳಿಕೆ, ಶಿವರಾಮ ಪಳ್ಳಿ, ದಾಮೋದರ ಕಟ್ಟೆಮನೆ, ಅಶೋಕ್ ಕುಮಾರ್ ಮೂಲೆಮಜಲು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು ಬೆಳ್ಳಿರಥ ಆಗಮಿಸುವ ಅದ್ದೂರಿ ಸ್ವಾಗತಕ್ಕಾಗಿ ಸಲಹೆ ಸೂಚನೆಗಳನ್ನು ನೀಡಿದರು.
ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಕಾರ್ಯದರ್ಶಿ ವಿಶ್ರಾಂತ ಉಪನ್ಯಾಸಕ ಪ್ರೊ.ವಿಶ್ವನಾಥ ನಡುತೋಟ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading