- Saturday
- March 7th, 2026
ಹರಿಹರ ಪಳ್ಳತ್ತಡ್ಕ ಗ್ರಾಮದ ಮುಖ್ಯ ಪೇಟೆಯ ಮುಖ್ಯ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಗುಂಡಿಗಳು ಬಿದ್ದು, ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿತ್ತು. ಇದನ್ನು ಗಮನಿಸಿದ ಸಚಿನ್ ಕ್ರೀಡಾ ಸಂಘದ ಸದಸ್ಯರು ನ.01 ರಂದು ಶ್ರಮದಾನದ ಮುಖಾಂತರ ಆ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಕೆಲಸವನ್ನು ಮಾಡಿದರು.
ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಇಂದು ಭೇಟಿ ನೀಡಿದರು. ಆದಿ ಸುಬ್ರಹ್ಮಣ್ಯ ಮತ್ತು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡು ಮಹಾಪೂಜೆ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ...
ಸುಬ್ರಹ್ಮಣ್ಯ ನವಂಬರ್ 02 : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶುದ್ಧ ಏಕಾದಶಿ ಆದರೂ ದೂರ ದೂರಗಳಿಂದ ಶ್ರೀ ದೇವರ ದರ್ಶನಕ್ಕೆ ಬಂದ ಭಕ್ತರೇ ಅಧಿಕವಾಗಿದ್ದರು. ಬೆಳಿಗ್ಗೆ ಕುಮಾರಧಾರ ಸ್ನಾನಘಟ್ಟದ ಬಳಿ ಬೆಳಗ್ಗಿನ ಜಾವ ತೀರ್ಥ ಸ್ಥಾನ ಮಾಡಲು ಭಕ್ತರ ದಂಡೆ ಇತ್ತು. ಶ್ರೀ ದೇವಳದ ವತಿಯಿಂದ ತೀರ್ಥ ಸ್ಥಾನ ಮಾಡುವ ಮಹಿಳೆಯರಿಗೆ ಶೌಚಾಲಯದ...
ಸುಬ್ರಹ್ಮಣ್ಯ ನ.02 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಕುರುಂಜಿ ಡಾ.ರೇಣುಕಾ ಪ್ರಸಾದ್ ಕುಟುಂಬದವರು ನೀಡಲಿರುವ ಬೆಳ್ಳಿ ರಥವು 05ರಂದು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದು, ಅದನ್ನು ಸ್ವಾಗತಿಸಲು ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿ ವತಿಯಿಂದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನವೆಂಬರ್ 01 ರಂದು ನಡೆದ ಸಭೆಯ ಅಧ್ಯಕ್ಷತೆಯನ್ನು...
ಸುಬ್ರಹ್ಮಣ್ಯ ನವಂಬರ್ 02 : “ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಗರಾಧನೆಯಲ್ಲಿ ಇಡೀ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಸಂತೃಪ್ತಿ ಹೊಂದುತ್ತಾರೆ. ವಿವಿಧ ರೀತಿಯ ಅನಾರೋಗ್ಯ ಕಾಯಿಲೆಗಳು, ಸಂತಾನ ಭಾಗ್ಯ, ಮದುವೆ, ಕೃಷಿ, ವ್ಯಾಪಾರದಲ್ಲಿ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಾ ಬಂದವರು ಇಲ್ಲಿ...
ಸುಬ್ರಹ್ಮಣ್ಯ ನ.02 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಇದೇ ನವಂಬರ್ 14ರಿಂದ ಮೂಲ ಮೃತ್ತಿಗೆ ಪ್ರಸಾದ ತೆಗೆಯುವುದರೊಂದಿಗೆ ಆರಂಭವಾಗಿ ಮರುದಿನ ನವೆಂಬರ್ 15ರಂದು ಕೊಪ್ಪರಿಗೆ ಏರುವುದರೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿರುವುದು. ಜಾತ್ರೋತ್ಸವಕ್ಕೆ ಬಹಳಷ್ಟು ಕೆಲಸ ಕಾರ್ಯಗಳು ಶ್ರೀ ದೇವಳದ ವತಿಯಿಂದ ಆಗಬೇಕಾಗಿದ್ದು, ಇದೀಗ ಕುಮಾರದಿಂದ ರಥಬೀದಿಯಾಗಿ ಶ್ರೀ...
