Ad Widget

ಕೊಲ್ಲಮೊಗ್ರ : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಹಾಗೂ ಜನಜಾಗೃತಿ ವೇದಿಕೆ ಸುಭ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆ.ವಿ.ಜಿ ಅನುದಾನಿತ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀಮತಿ ಸಂಧ್ಯಾರವರ ಅಧ್ಯಕ್ಷತೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಕೆ.ವಿ.ಜಿ ಅನುದಾನಿತ ಪ್ರೌಢ ಶಾಲೆ ಕೊಲ್ಲಮೊಗ್ರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಮಾಧವ ಚಾಂತಳರವರು ದೀಪ ಪ್ರಜ್ವಲಿಸಿ ಮಾತನಾಡುತ್ತ, “ಮಕ್ಕಳು ದುಶ್ಚಟಗಳಿಗೆ ಬಲಿಯಾಗಬಾರದು, ಮಾದಕ ವ್ಯಸನಗಳಿಂದ ದೂರ ಇರಬೇಕು, ಮಕ್ಕಳಲ್ಲಿ ಒಳ್ಳೆಯ ಗುಣನಡತೆಗಳು ಇರಬೇಕು. ಮಾನವೀಯತೆ, ಭಾರತೀಯ ಪರಂಪರೆ, ಶಿಷ್ಟಾಚಾರಗಳ ಬಗ್ಗೆ ಗೊತ್ತಿರಬೇಕು. ಮುಂದಿನ ಜೀವನದಲ್ಲಿ ಉತ್ತಮವಾದ ಪ್ರಜೆಯಾಗಿ ಬದುಕಬೇಕೆಂದು” ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಗುತ್ತಿಗಾರು ಲೋಕೇಶ್ ಪೀರನಮನೆರವರು ಮಾತನಾಡುತ್ತಾ “ಮಕ್ಕಳಲ್ಲಿ ಮೊದಲಾಗಿ ಶಿಸ್ತು, ನಿಯಮ ಪಾಲನೆ, ಸಮಯ ಪಾಲನೆ ಬಗ್ಗೆ ಅರಿವು ಇರಬೇಕು. ಹದಿಹರೆಯದಲ್ಲಿನ ಒತ್ತಡ, ತಂದೆ ತಾಯಿಯವರ ಒತ್ತಡ, ಸ್ನೇಹಿತರ ಒತ್ತಡಗಳಿಂದ ದೂರ ಇರಬೇಕು, ಉತ್ತಮವಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು, ಮಕ್ಕಳು ಸಿಗರೇಟ್, ಡ್ರಗ್ಸ್, ಗುಡ್ಕ, ಮದ್ಯ, ಮಾದಕ ವಸ್ತುಗಳ ಸೇವನೆಗಳಿಂದ ದೂರ ಇರಬೇಕು. ಇವುಗಳನ್ನು ಸೇವನೆ ಮಾಡುವುದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿ ಜೀವನ ಪರಿಯಂತ ಜೀವನವನ್ನೇ ಹಾಳುಮಾಡಿಕೊಳ್ಳಬೇಕಾಗುತ್ತೆ. ಆದ ಕಾರಣ ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಳ್ಳೆಯ ಶಿಕ್ಷಣವನ್ನು ಪಡೆದು ಮುಂದಿನ ಜೀವನದ ಬಗ್ಗೆ ಚಿಂತನೆಯನ್ನು ಮಾಡಬೇಕು. ಶಾಲೆಯಲ್ಲಿ ಒಬ್ಬ ಆದರ್ಶ ವಿದ್ಯಾರ್ಥಿ, ವಿದ್ಯಾರ್ಥಿನಿಯಾಗಿ ಬೆಳೆಯಬೇಕು. ನಮ್ಮನ್ನು ಬೆಳೆಸಿದ ಪೋಷಕರನ್ನು, ಕಲಿಸಿದ ಗುರುಗಳನ್ನು ಗೌರವಿಸಬೇಕು. ಮಾನವೀಯ ಮೌಲ್ಯದ ಬಗ್ಗೆ ಅರಿವು ಇರಬೇಕು. ಪ್ರತಿಯೊಬ್ಬರು ಆದರ್ಶ ಪ್ರಜೆಯಾಗಿ ಬದುಕಿ, ಉತ್ತಮವಾದ ಜೀವನವನ್ನು ನಡೆಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಚಂದ್ರಶೇಖರ ಕೊಂದಾಳ, ಕೊಲ್ಲಮೊಗ್ರ ಬಿ ಒಕ್ಕೂಟದ ಅಧ್ಯಕ್ಷರಾದ ಹೇಮಂತ್ ಸಿ, ಕೊಲ್ಲಮೊಗ್ರ ಬಿ ಒಕ್ಕೂಟದ ಉಪಾಧ್ಯಕ್ಷರಾದ ಚಂದ್ರಶೇಖರ ಕೋನಡ್ಕ, ಶಿರೂರು ಚಾಂತಳ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಶ್ರೀಮತಿ ರೇಖಾರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮಕ್ಕಳು, ಶಿಕ್ಷಕರು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಲೋಕನಾಥರವರು ಸ್ವಾಗತಿಸಿದರು.
ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಕಾರ್ಯನಿರೂಪಿಸಿದರು.
ಶಾಲಾ ಶಿಕ್ಷಕರಾದ ರಾಜೇಶ್ ರವರು ಧನ್ಯವಾದವಿತ್ತರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading