Ad Widget

ಜೂ.20 ರಂದು ಉಲ್ಲಾಸ್ ಕಜ್ಜೋಡಿ ರವರ ಮೊದಲ ಕೃತಿ “ಜೀವನಯಾನ” ಕವನ ಸಂಕಲನ ಬಿಡುಗಡೆ

ಅಮರ ಸುದ್ದಿ ವಾರಪತ್ರಿಕೆಯಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಲ್ಲಾಸ್ ಕಜ್ಜೋಡಿ ರವರ ಮೊದಲ ಕೃತಿ “ಜೀವನಯಾನ” ಕವನ ಸಂಕಲನವು ಜೂ.20 ರಂದು ಬಿಡುಗಡೆಗೊಳ್ಳಲಿದ್ದು, ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕುರುಂಜಿಬಾಗ್ ನ ಸಂಧ್ಯಾರಶ್ಮಿ ಸಭಾಂಗಣದಲ್ಲಿ ಜೂ.20 ರಂದು ನಡೆಯಲಿರುವ ಸಾಹಿತಿ ಕೆ.ಆರ್ ತೇಜಕುಮಾರ್ ಬಡ್ಡಡ್ಕ ರವರ ವ್ಯಕ್ತಿತ್ವ ಹಾಗೂ ಕೃತಿ ಪರಿಚಯದ “ತಿಂಗಳ ಸಾಹಿತ್ಯ ಸಂವಾದ ಮಾಲಿಕೆ” ಕಾರ್ಯಕ್ರಮದಲ್ಲಿ ಉಲ್ಲಾಸ್ ಕಜ್ಜೋಡಿ ರವರ ಮೊದಲ ಕೃತಿ “ಜೀವನಯಾನ” ಕವನ ಸಂಕಲನವು ಬಿಡುಗಡೆಗೊಳ್ಳಲಿದೆ.
ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮಚಂದ್ರ ಪಳಂಗಾಯ ರವರು ವ್ಯಕ್ತಿತ್ವ ಪರಿಚಯ ಮಾಡಲಿದ್ದು, ಬಾಬು ಮಾಸ್ತರ್ ಅಚ್ರಪ್ಪಾಡಿ ರವರು ಕೃತಿ ಪರಿಚಯ ಮಾಡಲಿದ್ದಾರೆ.
ಗೌರವ ಉಪಸ್ಥಿತರಾಗಿ ಸುಳ್ಯ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷರಾದ ಡಾ| ಎಸ್.ರಂಗಯ್ಯ, ಬಂಟಮಲೆ ಅಕಾಡೆಮಿ ಅಧ್ಯಕ್ಷರಾದ ಎ.ಕೆ ಹಿಮಕರ, ಸಾಹಿತಿಗಳಾದ ಅರವಿಂದ ಚೊಕ್ಕಾಡಿ ಹಾಗೂ ಪ್ರಾಯೋಜಕರಾದ ಡಾ| ಕೇಶವ.ಪಿ.ಕೆ ಉಪಸ್ಥಿತರಿರಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ರವರು ನಿರೂಪಣೆ ಮಾಡಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading