
ಕೊಲ್ಲಮೊಗ್ರು ಗ್ರಾಮದ ಚಿದಾನಂದ ಮಲ್ಲಾಜೆ ಜೂ.16ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಕೆಲ ಸಮಯಗಳಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು.
ಮೃತರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮೀನಾಕ್ಷಿ, ಪುತ್ರಿ ಶ್ರೀಮತಿ ಸಂಧ್ಯಾ ಶ್ರೀಧರ್ ಮೆಟ್ಟಿನಡ್ಕ, ಪುತ್ರ ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಅಕ್ಷಯ್, ಸಹೋದರರಾದ ಗೋಪಾಲಕೃಷ್ಣ, ಅಶೋಕ್, ಸಹೋದರಿ ಶ್ರೀಮತಿ ರತ್ನಾವತಿ ಐನೆಕಿದು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
