Ad Widget

ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವತಿಯಿಂದ ಕೃಷಿ ಸಲಕರಣೆ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಸಾಲಮೇಳ

. . . . . . . . .

ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವತಿಯಿಂದ ಕೃಷಿ ಸಲಕರಣೆ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಸಾಲಮೇಳ ಕಾರ್ಯಕ್ರಮವು ಯುವಕ ಮಂಡಲ ಮಡಪ್ಪಾಡಿ ಇದರ ಸಭಾಂಗಣದಲ್ಲಿ ನಡೆಯಿತು.

. . . . . . .

ಕಾರ್ಯಕ್ರಮವನ್ನು ಎನ್.ಟಿ. ಹೊನ್ನಪ್ಪ, ಕೃಷಿಕರು ಹಾಗೂ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಉದ್ಘಾಟಿಸಿ ಶುಭಹಾರೈಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನಯ್ ಕುಮಾರ್ ಮುಳುಗಾಡು ಅಧ್ಯಕ್ಷರು ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇವರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಚಿನ್ ಬಳ್ಳಡ್ಕ ಉಪಾಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಮಡಪ್ಪಾಡಿ, ಸದಾನಂದ ಬಲ್ಕಜೆ ಅಧ್ಯಕ್ಷರು ಎಸ್.ಡಿ.ಎಂ.ಸಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ,ಕಿರಣ್ ಕುಮಾರ್ ಶೀರಡ್ಕ ಅಧ್ಯಕ್ಷರು ಯುವಕ ಮಂಡಲ ಮಡಪ್ಪಾಡಿ, ವಿನ್ಯಾಸ್ ಪಾರೆಮಜಲು ಅಧ್ಯಕ್ಷರು ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ,ಎಸ್.ಆರ್.ಕೆ ಲ್ಯಾಡರ್ಸ್ ಹಾಗೂ ಸಾಯ ಎಂಟರ್ಪ್ರೈಸಸ್ ಇದರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಹಕಾರಿ ಸಂಘದ ನಿದೇರ್ಶಕರುಗಳು, ಸದಸ್ಯರಗಳು, ಕೃಷಿಕರು ಉಪಸ್ಥಿತರಿದ್ದರು.


ಎಸ್.ಆರ್.ಕೆ ಲ್ಯಾಡರ್ಸ್ ಹಾಗೂ ಸಾಯ ಎಂಟರ್ಪ್ರೈಸಸ್ ನ ಮೂಲಕ ಕೃಷಿಕರು ಕೃಷಿ ಸಲಕರಣೆ ಖರೀದಿ ಮತ್ತು ಉಪಕರಣಗಳ ಮಾಹಿತಿಯನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಪ್ರಶಾಂತ್ ಪೂಂಬಾಂಡಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷಿ ಪತ್ತಿನ ಸಹಕಾರಿ ಸಂಘ ಇವರು ನಿರೂಪಿಸಿ, ಸಚಿನ್ ಬಳ್ಳಡ್ಕ ಉಪಾಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಸ್ವಾಗತಿಸಿ, ಸುನಿಲ್ ಮಡಪ್ಪಾಡಿ ಧನ್ಯವಾದ ಅರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading