Ad Widget

ಜನ ಔಷಧಿ ಕೇಂದ್ರ ಮುಚ್ಚುಗಡೆಯ ಮೂಲಕ ರಾಜ್ಯ ಸರ್ಕಾರ ಬಡಜನ ವಿರೋಧಿ ಧೋರಣೆ ಸ್ಪಷ್ಟವಾಗಿದೆ – ವೆಂಕಟ್ ವಳಲಂಬೆ

ಬಡವರಿಗೆ ಮತ್ತು ಜನಸಾಮಾನ್ಯರಿಗೆ ಗುಣಮಟ್ಟದ ಔಷಧಿ,ಕಡಿಮೆ ದರದಲ್ಲಿ ದೊರೆಯುವಂತೆ ಕೇಂದ್ರ ಸರ್ಕಾರ ತಂದಿದ್ದ ಜನ ಔಷಧಿ ಕೇಂದ್ರವನ್ನು ರಾಜ್ಯ ಸರ್ಕಾರ ಸಕಾರಣವಿಲ್ಲದೆ  ಬಂದ್ ಮಾಡಲು ಆದೇಶ ಮಾಡಿರುವುದನ್ನು ಬಿಜೆಪಿ ಮಂಡಲ ಅಧ್ಯಕ್ಷ  ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಜನಸಾಮಾನ್ಯರಿಗೆ ಈ ಕೇಂದ್ರಗಳಿಂದ ಆರೋಗ್ಯ ವ್ಯವಸ್ಥೆ ಅಗ್ಗವಾಗಿ ದೊರೆಯಬೇಕೆಂದು ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಈ ಯೋಜನೆ ಜಾರಿಗೆ ತಂದಿದ್ದರು.ಮಾತ್ರೆ,ಔಷಧಿ ಸಂಬಂಧಿತ ವಸ್ತು ಮಿತದರದಲ್ಲಿ ದೊರಕುತ್ತಿದ್ದವು. ಅಲ್ಲದೆ ಸಾವಿರಾರು ರೂಪಾಯಿ ಉಳಿತಾಯವಾಗುತ್ತಿತ್ತು ಇಂತಹ ಒಳ್ಳೆಯ ಜನಪರ,ಬಡವರ ಪರ ಯೋಜನೆ ನಿಲ್ಲಿಸುವ ರಾಜ್ಯಸರ್ಕಾರ ಜನವಿರೋಧಿ ನೀತಿಯನ್ನು ಮತ್ತೊಮ್ಮೆ ಮರು ಪರಿಶೀಲಿಸಿ ಔಷಧಿ ಕೇಂದ್ರಗಳನ್ನು ಮುಚ್ಚದಂತೆ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ  ಒತ್ತಾಯಿಸಿದ್ದಾರೆ.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!