
ಅರಂತೋಡು ಗ್ರಾಮ ಪಂಚಾಯತ್ ನ ಎನ್.ಆರ್. ಎಲ್. ಎಂ. ನೂತನ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮ ಮೇ.21 ರಂದು ನಡೆಯಿತು. ಸುಳ್ಯ ಶಾಸಕರಾದ ಮಾನ್ಯ ಕುl ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆ ನೆರವೇಸಿದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅರಂತೋಡು ಗ್ರಾಮ ಪಂಚಾಯತ್ ನ ಸಭಾಂಗಣಕ್ಕೆ ಅವಶ್ಯಕತೆ ಇರುವ ಪಾಕ ಶಾಲೆ ನಿರ್ಮಾಣಕ್ಕೆ ರೂ 5ಲಕ್ಷ ಅನುದಾನದ ಭರವಸೆಯೊಂದಿಗೆ ಅರಂತೋಡು ಗ್ರಾಮಕ್ಕೆ ಬಿಡುಗಡೆಯಾದ ಅನುದಾನಗಳ ಮಾಹಿತಿ ನೀಡಿದರು. ಬಹುದಿನಗಳ ಬೇಡಿಕೆಯಾಗಿದ್ದ ಅರಮನೆಗಯ ಬಳಿಯ ಬಲ್ನಾಡ್ ಹೊಳೆಗೆ ಸೇತುವೆ ನಿರ್ಮಾಣಕ್ಕೆ 1.75 ಕೋಟಿ ಅನುದಾನ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಹೊಂದಿದ ರೆಂಜಾಳ- ಬಿಳಿಯಾರು ರಸ್ತೆಯ ರೆಂಜಾಳದಿಂದ ಪಿಂಗಾರತೋಟದ ವರೆಗೆ ಮರು ಡಾಂಬರೀಕರಣಕ್ಕೆ ಅನುದಾನ ಮತ್ತು ದೇರಾಜೆ ಕೆರೆಮೂಲೆ ರಸ್ತೆ ಕಾಂಕ್ರೀಟೀಕರಣಕ್ಕೆ ರೂ 5ಲಕ್ಷ ಅನುದಾನ ಬಿಡುಗಡೆಯಾಗಿರುವುದಾಗಿ ತಿಳಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆರವರು ಮಾತನಾಡಿ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಂತೋಡು -ತೊಡಿಕಾನ ಅವಳಿ ಗ್ರಾಮದ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಗೊಳಿಸಿದಕ್ಕೆ ಮಾನ್ಯ ಶಾಸಕರೀಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆ ಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ ಚಿಟ್ಟನೂರು, ಅರಂತೋಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ರಾದ ಶ್ರೀ ಪ್ರಮೀಳಾ ಉಳುವಾರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ. ಎನ್. ಆರ್. ಎಲ್. ಎಂ. ತಾಲೂಕು ಅಧಿಕಾರಿಗಳು, ಅರಂತೋಡು ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರುಗಳು, ಗ್ರಾಮದ ಸಂಘ, ಸಂಸ್ಥೆ ಯ ಪದಾಧಿಕಾರಿಗಳು ಹಾಗೂ ಊರಿನ ನಾಗರೀಕರು ಹೆಚ್ಚಿನ ಸಂಖ್ಯೆ ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಂ. ಆರ್. ರವರು ಭಯೋತ್ಪಾದನಾ ವಿರೋಧಿ ದಿನಾಚರಣೆಯ ಪ್ರಮಾಣವಚನ ಬೋಧಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಮತ್ತು ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು.