
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡರಾಗಿದ್ದ ನವೀನ್ ರೈ ಮೇನಾಲರು ನಿಧನರಾಗಿ ಮೇ.18ಕ್ಕೆ ಎರಡು ವರ್ಷವಾಗಿದ್ದು ಆ ಪ್ರಯುಕ್ತ ಸ್ಮರಣೆ ಕಾರ್ಯಕ್ರಮ ಮೇನಾಲ ಶ್ರೀಕೃಷ್ಣಾ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ದಿ.ನವೀನ್ ರೈಯವರಿಗೆ ನುಡಿನಮನ ಸಲ್ಲಿಸಿದ ಸುಳ್ಯ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಸುಬೋಧ್ ಶೆಟ್ಟಿ ಮೇನಾಲರು
ನಮ್ಮನ್ನಗಲಿದ ನವೀನ್ ರೈ ಮೇನಾಲ ರವರು ಧಾರ್ಮಿಕ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ನಮ್ಮನ್ನೆಲ್ಲ ಮುನ್ನಡೆಸಿದವರು. ಅವರ ಅಗಲಿಕೆ ತುಂಬಲಾರದ ನಷ್ಟ. ಮನುಷ್ಯನ ಅಗಲುವಿಕೆ ಅನಿವಾರ್ಯವಾದರೂ ಈ ರೀತಿಯ ಸಾವನ್ನು ಅರಗಿಸಿಕೊಳ್ಳುವುದು ಕಷ್ಟ. ನವೀನ್ ರೈ ಒಬ್ಬರು ವ್ಯಕ್ತಿಯಲ್ಲ ಅವರೊಂದು ಶಕ್ತಿ. ಅವರ ಶರೀರ ನಮ್ಮೊಂದಿಗೆ ಇಲ್ಲವಾದರೂ ಅವರ ಆತ್ಮ ನಮ್ಮೊಂದಿಗೆ ಸದಾ ಇದೆ ಅವರನ್ನು ವರ್ಷಕ್ಕೆ ಒಂದು ಭಾರಿ ಮಾತ್ರ ಸ್ಮರಿಸದೆ ಪ್ರತಿದಿನವೂ ಸ್ಮರಿಸುವಂತಾಗಬೇಕು ಎಂದು ಅವರು ಹೇಳಿದರು.
ಭಜನಾ ಮಂದಿರದ ಸದಸ್ಯರು, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪದಾಧಿಕಾರಿಗಳು ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನವೀನ್ ರೈ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ನವೀನ್ ರೈ ಸ್ಮಾರಕ ರಚನೆ ಮಾಡಿ ಅವರ ನೆನಪು ಶಾಶ್ವತ ವಾಗಿರಿಸುವಂತೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ನಂತರ ಭಜನಾ ಮಂದಿರದ ಸುತ್ತ ಮುತ್ತ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಯಿತು.
ಬಾಲಕೃಷ್ಣ ಮೇನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.