
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಐನೆಕಿದು ವಾರ್ಡ್ ನ ತೆರವಾದ ಒಂದು ಸ್ಥಾನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿಜೆಪಿಯ ಶ್ರೀಮತಿ ಮೋಹಿನಿ ಶ್ರೀಧರ ಅಂಙಣ ರವರು ಮೇ.14 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಾಮಪತ್ರ ಸಲ್ಲಿಕೆ ಮಾಡಲು ನಿನ್ನೆ ಕೊನೆಯ ದಿನವಾಗಿದ್ದು, ಇತರೆ ಯಾವುದೇ ಪಕ್ಷಗಳು ಅಥವಾ ವ್ಯಕ್ತಿಗಳು ನಾಮಪತ್ರ ಸಲ್ಲಿಸದೇ ಇರುವ ಕಾರಣ ಮೋಹಿನಿರವರ ಆಯ್ಕೆ ಸಾಧ್ಯತೆ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಮೇ.15 ಅಂದರೆ ಇಂದು ನಾಮಪತ್ರ ಪರಿಶೀಲನೆ ನಡೆದ ಬಳಿಕ ಈ ಬಗ್ಗೆ ತಿಳಿಯಲಿದೆ.