Ad Widget

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಳ್ಳಾರೆಯ ಜ್ಞಾನದೀಪ ಆಸರೆ

. . . . . . . . .

ಬೆಳ್ಳಾರೆ ಮತ್ತು ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ ಸಂಸ್ಥೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಆಶಾಕಿರಣವಾಗಿದೆ.
ಹಿಂದಿನ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆ ಬರೆದು ಶಿಕ್ಷಣವನ್ನು ಮುಂದುವರಿಸುವ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ. ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೆ ಹೊಸ ದಾರಿಯನ್ನು ತೋರಿಸಿಕೊಡುವ ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅಥವಾ 10ನೇ ತರಗತಿ ಪಾಸಾದವರು ದ್ವಿತೀಯ ಪಿಯುಸಿ ವಾಣಿಜ್ಯ ಅಥವಾ ಕಲಾ ವಿಭಾಗಕ್ಕೆ ಹಾಗೂ 7,8,9ನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದವರು ನೇರವಾಗಿ ಎಸ್.ಎಸ್.ಎಲ್.ಸಿ, ತರಗತಿಗೆ ಸೇರ್ಪಡೆ ಮಾಡಲಾಗುತ್ತಿದೆ.

ಪ್ರಾಮಾಣಿಕ ಫಲಿತಾಂಶ
ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಅಂಕ ಗಳಿಸುವ ಸಾಮರ್ಥ್ಯವಿದೆ ಎಂಬುವುದನ್ನು ಮನದಟ್ಟು ಮಾಡಿ ಕಲಿಸುವ ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಲಿಯುವ ಹಠವನ್ನು ಹುಟ್ಟಿಸುತ್ತಾರೆ. ಪ್ರತಿವರ್ಷ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಕಳೆದ 18 ವರ್ಷಗಳಿಂದ ಸಂಸ್ಥೆ ಪ್ರಾಮಾಣಿಕ ಫಲಿತಾಂಶವನ್ನು ನೀಡುತ್ತಾ ಬಂದಿದೆ.

ರೆಗ್ಯುಲ‌ರ್ ತರಗತಿಗಳಲ್ಲದೆ ಕಂಪ್ಯೂಟರ್ ತರಬೇತಿ, ನವೋದಯ ತರಬೇತಿ, ಎನ್.ಟಿ.ಟಿ.ಸಿ ತರಬೇತಿ ಮೊದಲಾದ ತರಬೇತಿಗಳನ್ನು ಸಂಸ್ಥೆ ಸಂಘಟಿಸುತ್ತಿದೆ. ಪ್ರತಿವರ್ಷವೂ ಜ್ಞಾನದೀಪದಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ನಡೆಯುತ್ತದೆ. ಹೆತ್ತವರ ಸಮಾಲೋಚನಾ ಸಭೆಗಳು ನಿರಂತರವಾಗಿ ನಡೆಯುತ್ತದೆ. ಜಗತ್ತಿಗೆ ಜ್ಞಾನದೀಪದ ಮಾಹಿತಿ ನೀಡಬಲ್ಲ ವೆಬ್‌ಸೈಟ್ ಹೊಂದಿರುವ ಜ್ಞಾನದೀಪ ಹೊರದೇಶದಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಂಡ ತನ್ನ ಹಳೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮಾಹಿತಿ ತಲುಪಿಸುವ ಕಾರ್ಯ ಮಾಡಿದೆ.

18 ವರ್ಷಗಳ ಶೈಕ್ಷಣಿಕ ಸೇವೆ

ಕಲಿಕೆಯಲ್ಲಿ ಹಿಂದುಳಿದ ಹಾಗೂ ಓದು ನಿಲ್ಲಿಸಿದ ವಿದ್ಯಾಥಿಗಳಿಗಾಗಿ ಶಾಲಾ ಕಾಲೇಜು ಮಾದರಿ ಶಿಕ್ಷಣ ಸಂಸ್ಥೆಯನ್ನು 2008ರಲ್ಲಿ ಆರಂಭಿಸಿದ ಜ್ಞಾನದೀಪ ಗುಣಮಟ್ಟದ ಫಲಿತಾಂಶ ಭರಿತ ಶಿಕ್ಷಣದೊಂದಿಗೆ 18 ವರ್ಷಗಳನ್ನು ಪೂರೈಸಿದೆ. ಫಲಿತಾಂಶದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಮುನ್ನಡೆಯುತ್ತಿರುವ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ 19ನೇ ವರ್ಷಕ್ಕೆ ಕಾಲಿರಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!