
ಅಂಬೆಕಲ್ಲು ತರವಾಡು ಮನೆ ನಾಗಪ್ರತಿಷ್ಟೆ ಶ್ರೀ ಧರ್ಮದೈವ ದೇವಸ್ಥಾನದಲ್ಲಿ ಧರ್ಮದೈವದ ನಡಾವಳಿ ಹಾಗೂ ಉಪ ದೈವಗಳ ನೇಮೋತ್ಸವವು ಮೇ 10 ಮತ್ತು 11 ರಂದು ನಡೆಯಲಿದೆ.

ಇಂದು ಬೆಳಗ್ಗೆ 5.30 ಕ್ಕೆ ದೈವಗಳ ಭಂಡಾರ ಹಿಡಿಯುವುದು, ಸಂಜೆ 6.00 ರಿಂದ ಎಣ್ಣೆ ಕೊಡುವುದು, 7.00 ಕ್ಕೆ ಕೊಲೆಕೋಲ, ಸತ್ಯ ದೇವತೆ ನೇಮ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.30 ಕ್ಕೆ ಪಾಷಾನಮೂರ್ತಿ ನೇಮ, 11.30 ರಿಂದ ವರ್ಣಾರ ಪಂಜುರ್ಲಿ ಮತ್ತು ಕುಪ್ಪೆ ಪಂಜುರ್ಲಿ ದೈವದ ನೇಮ ಹಾಗೂ 3.00 ರಿಂದ ರುದ್ರ ಚಾಮುಂಡಿ ಧರ್ಮ ದೈವದ ನೇಮ ನಡೆಯಲಿದೆ .
ನಾಳೆ ಬೆಳಗ್ಗೆ 6.30 ರಿಂದ ಗುಳಿಗ ದೈವದ ನೇಮ, 7.30 ಕ್ಕೆ ಕುಕ್ಕೇತಿ ಬಳ್ಳು ನೇಮಕ್ಕೆ ಎಣ್ಣೆಕೊಡುವುದು, 9.30 ರಿಂದ ಕುಕ್ಕೇತಿ ಬಳ್ಳು ನೇಮ , ಮದ್ಯಾಹ್ನ 12.30 ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.