
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಆಯೋಗದಿಂದ ಸಮೀಕ್ಷೆ ಆರಂಭವಾಗಿದ್ದು ಇದರ ಸಮೀಕ್ಷೆ ಮನೆ ಮನೆಗಳಿಗೆ ಮಾಹಿತಿಗೆ ಬರುವ ಸಂದರ್ಭದಲ್ಲಿ ಅದಿದ್ರಾವಿಡ ಸಮುದಾಯದವರೂ ಮೂಲ ಜಾತಿ ಅದಿದ್ರಾವಿಡ ಉಪಜಾತಿ ಗೊತ್ತಿಲ್ಲ ಎಂದು ನಮೂದಿಸಬೇಕು ಎಂದು ಸುಳ್ಯ ಅದಿದ್ರಾವಿಡ ಸಮಾಜ ಸೇವಾ ಸಂಘ ಪಧಾದಿಕಾರಿಗಳು ಮೆ.7 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರುಸುದ್ದಿ ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ಡಿ ಪಿ ದೊಡ್ಡರಿ,ಗೌರವ ಸಲಹೆಗಾರರಾದ ಚನಿಯ ಕಲ್ಲಡ್ಕ,ರಾಮಚಂದ್ರ ಬಿ.ಕೆ,ಸ್ಥಾಪಕಧ್ಯಕ್ಷರಾದ ಕೆ ಎಂ ಬಾಬು ಜಾಲ್ಲೂರು,ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ಆಲಡ್ಕ ಉಪಸ್ಥಿತರಿದ್ದರು.