
ಸಮಾಜ ಸೇವಕ ಡಾ.ರವಿ ಕಕ್ಕೆಪದವು ರವರು ಸಾಮಾಜಿಕ ಕ್ಷೇತ್ರದಲ್ಲಿ ಮಾಡುತ್ತಿರುವಂತಹ ಸೇವೆಯನ್ನು ಗುರುತಿಸಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರವಿ ಕಕ್ಕೆಪದವು ರವರಿಗೆ “2025ನೇ ಸಾಲಿನ ಕಾಯಕಯೋಗಿ ರಾಜ್ಯ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆ.
ಮೇ.01 ರಂದು ಬಾಗಲಕೋಟೆಯ ಶ್ರೀ ಶಿವ ದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಕಕ್ಕೆಪದವು ರವರು ಪ್ರಶಸ್ತಿಯನ್ನು ಸ್ವೀಕರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)