
8-9ನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಐದು ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 80 ಫಲಿತಾಂಶ ದಾಖಲಾಗಿದೆ. ಶ್ರಾವ್ಯ ಎನ್ ಎಂ (424), ಪ್ರಸ್ತಿ ಬಿ ಎಸ್ (374), ಗಗನ್ ಎಂ ಎಸ್ (300) ಅಂಕ ಗಳಿಸಿದ್ದಾರೆ.
ತುಳುವಿನಲ್ಲಿ ಶ್ರಾವ್ಯ 100 ಅಂಕದ ಸಾಧನೆ
ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಖಾಸಗಿ ಅಭ್ಯರ್ಥಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿ ಶ್ರಾವ್ಯ ಪೂರ್ಣ 100 ಅಂಕ ಪಡೆದಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ಹೊರತು ಪಡಿಸಿ 80 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಆಂತರಿಕ ಅಂಕಗಳಿಲ್ಲದೆ ಶ್ರಾವ್ಯ ಪೂರ್ಣ ಅಂಕದ ಸಾಧನೆ ಮಾಡಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆ ತರಗತಿಗಳನ್ನು ನಡೆಸುತ್ತಿದ್ದು, 2018ರಿಂದ ಸಂಸ್ಥೆಯಲ್ಲಿ ತುಳು ತೃತೀಯ ಭಾಷೆಯ ತರಗತಿಯನ್ನು ಆರಂಭಿಸಲಾಗಿತ್ತು.