Ad Widget

ರಜತ ಸಂಭ್ರಮದಲ್ಲಿ ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ – ಮೇ 10 ಹಾಗೂ 11 ರಂದು ಬೆಳ್ಳಿ ಹಬ್ಬ ಆಚರಣೆ

ಸುಳ್ಯ: ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿ ಹಬ್ಬ ಆಚರಣೆ ‘ರಜತ ಸಂಭ್ರಮ’ ಮೇ.10 ಮತ್ತು 11 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ನಡೆಯಲಿದೆ ಎಂದು ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಮತ್ತು ಬೆಳ್ಳಿಹಬ್ಬ ಆಚರಣಾ ಸಮಿತಿಯ ಅಧ್ಯಕ್ಷೆ ಚಂದ್ರಾಕ್ಷಿ ಜೆ ರೈ ತಿಳಿಸಿದ್ದಾರೆ. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು ಮೇ.10ರಂದು ಸಂಜೆ 7ಕ್ಕೆ ಬೆಳ್ಳಿಹಬ್ಬ ಆಚರಣೆಯನ್ನು ಸುಳ್ಯ ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್‌ನ ಉಪಾಧ್ಯಕ್ಷೆ ಶೋಭಾ ಚಿದಾನಂದ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಸದಸ್ಯರು ಮತ್ತು ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ, ಯೋಗಿತಾ ಗೋಪಿನಾಥ್, ಲಯನ್ಸ್ ವಲಯಾಧ್ಯಕ್ಷೆ ರೂಪಶ್ರೀ ಜೆ ರೈ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.ಇದಕ್ಕೂ ಮುನ್ನ ಜಟ್ಟಿಪಳ್ಳ ಸ್ವಾಗತ ದ್ವಾರದಿಂದ ಬೆಳ್ಳಿ ಹಬ್ಬ ಮೆರವಣಿಗೆ ನಡೆಯಲಿದೆ. ಸುಳ್ಯ ಪೊಲೀಸ್ ಠಾಣೆಯ ಕ್ರೈಂ ಪೋಲೀಸ್ ಉಪನಿರೀಕ್ಷಕರಾದ ಸರಸ್ವತಿ ಬಿ ಟಿ ಯವರು ಚಾಲನೆ ನೀಡಲಿದ್ದಾರೆ. ಬೆಳ್ಳಿ ಹಬ್ಬದ ಧ್ವಜಾರೋಹಣವನ್ನು ಜಟ್ಟಿಪಳ್ಳ ಶಾಲಾ ಮುಖ್ಯೋಪಾಧ್ಯಾಯಿನಿ ಸ್ವರ್ಣಕಲಾ ನೆರವೇರಿಸುವರು. ಇದೇ ಸಂದರ್ಭದಲ್ಲಿ ಯುವಸದನ ಕಟ್ಟಡದ ಬಳಿ ಸರೋಜಿನಿ ಪೆಲತ್ತಡ್ಕ ಅವರ ಅನುದಾನ ರೂ 3.5 ಲಕ್ಷದಲ್ಲಿ ನಿರ್ಮಿಸಿದ ತಡೆಗೋಡೆಯ ಉದ್ಘಾಟನೆ ಹಾಗೂ ಸಾರ್ವಜನಿಕ ಶೌಚಾಲಯಕ್ಕೆ ಗುದ್ದಲಿ ಪೂಜೆ ನಡೆಯಲಿದೆ. 6.30ರಿಂದ ಕೆ.ಆರ್ ಗೋಪಾಲಕೃಷ್ಣ ಮತ್ತು ಸುಭದಾ ಆರ್ ಪ್ರಕಾಶ್ ರವರಿಂದ ಭಾವಗಾನ ಕಾಯಕ್ರಮ, ರಾತ್ರಿ 9 ರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಮೇ.11ರಂದು ಜಟ್ಟಿಪಳ್ಳ ಯುವಸದನದಲ್ಲಿ ಸುಳ್ಯ ತಾಲೂಕು ವಿವಿಧ ಮಹಿಳಾ ಮಂಡಲಗಳ ಸಹಭಾಗಿತ್ವದಲ್ಲಿ ಮಹಿಳಾ ರಜತಸಂಭ್ರಮ ‘ವಿಚಾರಗೋಷ್ಠಿ’ ನಡೆಯಲಿದೆ.ಸಂಜೆ 6 ರಿಂದ ಬೆಳ್ಳಿಹಬ್ಬ ಆಚರಣೆಯ ಸಮಾರೋಪ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಸಾಧಕರನ್ನು ಸನ್ಮಾನಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮತ್ತು ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳರು ಭಾಗವಹಿಸಲಿದ್ದಾರೆ.ಬೆಳ್ಳಿಹಬ್ಬದ ಸಮಾರೋಪ ಭಾಷಣವನ್ನು ಕೆ.ವಿ.ಜಿ ಅಮರ ಜ್ಯೋತಿ ಪ.ಪೂ.ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ರವರು ಮಾಡಲಿದ್ದು, ರಜತ ಸಂಭ್ರಮದ ನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆ ‘ಮಾನಿನಿ’ ಯನ್ನು ಸುಳ್ಯ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು ರವರು ಬಿಡುಗಡೆ ಮಾಡಲಿದ್ದಾರೆ. ಇದೆ ಸಂದರ್ಭದಲ್ಲಿ ಆರು ಜನ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಗುವುದು.’ಸಾರ್ಥಕ ಮಾನಿನಿ ಪ್ರಶಸ್ತಿ’: ಬೆಳ್ಳಿಹಬ್ಬ ‘ರಜತ ಸಂಭ್ರಮ’ ಆಚರಣೆಯ ನೆನಪಿಗಾಗಿ ಸುಳ್ಯದಲ್ಲಿ ಈ ಹಿಂದೆ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಮಹಿಳೆಯರ ಅಭ್ಯುದಯಯಕ್ಕಾಗಿ ದುಡಿದ ಸಾಧಕ ಹಿರಿಯ ಮಹಿಳೆಯರಾದ ಎಂ.ಮೀನಾಕ್ಷಿ ಗೌಡ, ಸುಮಾ ಸುಬ್ಬರಾವ್, ಕಮಲಾಕ್ಷಿ ವಿ.ಶೆಟ್ಟಿ ನೇತ್ರಾವತಿ ಪಡ್ಡಂಬೈಲು, ಕೆ.ಜಿ.ದೇವಿಕುಮಾರಿ ಅವರಿಗೆ ‘ಸಾರ್ಥಕ ಮಾನಿನಿ’ ಪ್ರಶಸ್ತಿಯನ್ನು ಅವರ ಮನೆಗಳಿಗೆ ತೆರಳಿ ನೀಡಿ ಗೌರವಿಸಲಾಗುವುದು ಎಂದು ಚಂದ್ರಾಕ್ಷಿ ರೈ ಹಾಗೂ ಚಿತ್ರಲೇಖ ಮಡಪ್ಪಾಡಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಕಾರ್ಯದರ್ಶಿ ಅನನ್ಯ ಅನಿಲ್‌, ಕೋಶಾಧಿಕಾರಿ ಸವಿತಾ ಲಕ್ಷ್ಮಣ ಆಚಾರ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಜಯಂತಿ ಆರ್‌ ರೈ ಹಾಗೂ ಗೌರವ ಸಲಹೆಗಾರರಾದ ದಿನೇಶ್‌ ಮಡಪ್ಪಾಡಿ ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!