
ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲೆಗೆ ಶೇ. 90.32% ಫಲಿತಾಂಶ ದಾಖಲಾಗಿದೆ. ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 28 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಕುಕ್ಕುಜಡ್ಕದ ರಾಘವ ಕೆ ಮತ್ತು ಸುಶೀಲ ಪಿ ದಂಪತಿಯ ಪುತ್ರಿ ಗೌತಮಿ ಆರ್ ಕೆ(575), ಕುಕ್ಕುಜಡ್ಕದ ಕೇನಡ್ಕ ನಾರಾಯಣ ಪಾಟಾಳಿ ಮತ್ತು ನಳಿನಾಕ್ಷಿ ಎಸ್ ದಂಪತಿಯ ಪುತ್ರಿ ಶರಣ್ಯ ಕೆ ಎನ್ (565), ಪೈಲಾರು ಮಾಡಬಾಕಿಲು ಯೋಗೀಶ್ ಮತ್ತು ಸವಿತಾ ಎಂ ದಂಪತಿಯ ಪುತ್ರಿ ವಿನ್ಯಾ (560), ಕುಂಡಾಡು ಪೆರಾಜೆಯ ರವಿಕುಮಾರ್ ಕೆ ಯು ಮತ್ತು ಸವಿತಾ ಕೆ ಆರ್ ದಂಪತಿಯ ಪುತ್ರಿ ತೃಪ್ತಿ ಕೆ ಆರ್ (559), ಚೊಕ್ಕಾಡಿ ನೇಣಾರು ಸುಬ್ರಹ್ಮಣ್ಯ ಬಿ ಮತ್ತು ವಸಂತಿ ಎನ್ ದಂಪತಿಯ ಪುತ್ರ ನಿತೀಶ್ ಎನ್(551), ಚೊಕ್ಕಾಡಿ ಪದವು ಸದಾನಂದ ಮತ್ತು ಲಲಿತ ದಂಪತಿಯ ಪುತ್ರಿ ಕೃತಿ(524) ಅಂಕ ಪಡೆದು ತೇರ್ಗಡೆಯಾಗಿರುತ್ತಾರೆ.
ಎ+ ಶ್ರೇಣಿಯಲ್ಲಿ 02 ವಿದ್ಯಾರ್ಥಿಗಳು, ಎ ಶ್ರೇಣಿಯಲ್ಲಿ 04 ವಿದ್ಯಾರ್ಥಿಗಳು, ಬಿ+ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು, ಬಿ ಶ್ರೇಣಿಯಲ್ಲಿ 05, ಸಿ+ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು, ಸಿ ಶ್ರೇಣೆಯಲ್ಲಿ 1 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.