
ಮಂಗಳೂರಿನ ಕುಡುಪು ಬಳಿ ಯುವ ವಲಸೆ ಕಾರ್ಮಿಕನೊಬ್ಬನನ್ನು ಸುಮಾರು ಮೂವತ್ತು ಜನ ಯುವಕರ ತಂಡವೊಂದು ಅತ್ಯಂತ ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಕೊಲೆಗೈದಿರುವುದು ಅತ್ಯಂತ ಖಂಡನೀಯ ಮತ್ತು ಜಿಲ್ಲೆಯ ಜನತೆ ಆತಂಕ ಪಡಬೇಕಾದ ವಿಷಯ .ಇದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ ಘಟನೆ .ಎಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯರಾದ ಜಾನಿ.ಕೆ.ಪಿ .ಅಭಿಪ್ರಾಯ ಪಟ್ಟರು. ಈ ಘಟನೆಯಲ್ಲಿ ಮಂಗಳೂರಿನ ಶಾಸಕರೊಬ್ಬರು ಕೆಲವು ಯುವಕರನ್ನು ಪ್ರಕರಣದಿಂದ ಬಚಾವ್ ಮಾಡಲು ಪ್ರಯತ್ನಿಸುತ್ತಿರುವ ಮಾಹಿತಿ ಹೊರಬಹುತ್ತಿದ್ದು ಪ್ರಕರಣವನ್ನು ಮುಚ್ಚಿಹಾಕಲು ಕೆಲವು ಪೋಲೀಸರು ಪ್ರಯತ್ನ ನಡೆಸಿದರೆನ್ನುವ ಮಾಹಿತಿಯೂ ಇದೆ. ಇಂತಹಾ ಪ್ರಯತ್ನಗಳು ಅತ್ಯಂತ ಹೇಯ ಕೃತ್ಯವಾಗಿದ್ದು ಜನಸಾಮಾನ್ಯರು ಖಂಡಿಸಲೇಬೇಕಾಗಿದೆ. ಇಂತಹಾ ಅಧಿಕಾರಿಗಳನ್ನು ಶೀಘ್ರವೇ ಅಮಾನತು ಮಾಡಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ವಲಸೆ ಕಾರ್ಮಿಕ ಆತ ಯಾರೇ ಆಗಿರಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುವಂತಾಗಬೇಕು ಎಂದು ಜಾನಿ ಕೆ. ಪಿ ಯವರು ಸರಕಾರಕ್ಕೆ ಒತ್ತಾಯಿಸುತ್ತಿದ್ದೇನೆ ಎಂದು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.