
ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಚಂದ್ರಾವತಿ ಕೆ ಇವರು ಸುದೀರ್ಘ 36 ವರ್ಷ 10 ತಿಂಗಳು ಸೇವೆ ಸಲ್ಲಿಸಿ ಏಪ್ರಿಲ್ 30 ರಂದು ನಿವೃತ್ತಿ ಹೊಂದಿದ್ದು, ಬೀಳ್ಕೊಡುಗೆ ಸಮಾರಂಭ ನಡೆಯಿತು.
ಗುತ್ತಿಗಾರು ಆರೋಗ್ಯ ಕೇಂದ್ರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಡಾ. ತ್ರಿಮೂರ್ತಿ (ತಾಲೂಕು ಆರೋಗ್ಯಾಧಿಕಾರಿ) ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಆರೋಗ್ಯಾಧಿಕಾರಿಗಳಾದ ಡಾ. ನಂದ ಕುಮಾರ್ ಬಾಳಿಕಳ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್ ಚಕ್ರದ, ಪಂಜ ಪ್ರಾ. ಆ ಕೇಂದ್ರದ ಶ್ರೀಮತಿ ರಾಹೇಲಮ್ಮ, ಹಾಗೂ ಶ್ರೀಮತಿ ಚಂದ್ರಾವತಿ ರವರ ಪತಿ ಸಂಜೀವ ನಾಯಕ್ (ಪ್ರ. ದರ್ಜೆ ಗುತ್ತಿಗೆದಾರರು ಮತ್ತು ಮಾಲಕರು ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ ಸುಳ್ಯ) ಇವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಶ್ರೀಮತಿ ಲಲಿತಾ ಹೆಚ್.ಕೆ ಪ್ರಾರ್ಥಿಸಿದರು. ಗುರುಪ್ರಸಾದ್ ಸ್ವಾಗತಿಸಿದರು. ಶ್ರೀಮತಿ ರೇವತಿ ಕೆ ಕಾರ್ಯಕ್ರಮ ನಿರೂಪಿಸಿದರು.