
ಇಂಪಾರ್ಟೆಂಟ್ ಎಫ್ ಸಿ (ರಿ.) ಗುತ್ತಿಗಾರು ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ, ಕಾಶ್ಮೀರದಲ್ಲಿ ನಡೆದ ಭಾರತೀಯ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ದೀಪಯಾತ್ರೆ ಪಂಜ ತಿರುವುದಿಂದ ಮುತ್ತಪ್ಪನಗರದವರೆಗೆ ಮತ್ತು ಮಾನ ಪ್ರಾರ್ಥನೆ ಕಾರ್ಯಕ್ರಮ ಎ. 26 ರಂದು ನಡೆಯಿತು.
ಕಾರ್ಯಕ್ರಮದಲ್ಲಿ, ಇಂಪಾರ್ಟೆಂಟ್ ಎಫ್ ಸಿ ಕಾರ್ಯದರ್ಶಿ ವರ್ಷಿತ್ ಕಡ್ತಲ್ ಕಜೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಇಂಪಾರ್ಟೆಂಟ್ ಎಫ್ ಸಿ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ಅವರು ಭಾಷಣ ಮಾಡಿ, ಈ ದುಷ್ಕೃತ್ಯ ಹೇಗೆ ನಡೆದಿದೆ ಎಂಬುದರ ಕುರಿತು ವಿವರಿಸಿದರು. ಮತ್ತು ಹಿಂದೂ ಸಮುದಾಯ ಒಗ್ಗೂಡಿ ಬದುಕಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು. ಚರಣ್ ಕೊಂಬೊಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅಜಿತ್ ಬಾಕಿಲ, ಚಂದ್ರಶೇಖರ ಕಡೋಡಿ, ಜಗದೀಶ್ ಬಾಕಿಲ ರಾಕೇಶ್ ಮೆಟ್ಟಿನಡ್ಕ, ಕೌಶಿಕ್ ಶ್ಯಾಮ್ ಮುಳಿಯ, ಶ್ರಿಶರಣ್ ಮೊಗ್ರ, ಅಮಿತ್ ನಾಯಕ್, ಪ್ರಶಾಂತ್ ಬಾಕಿಲ, ಲೋಕೇಶ್ ಪೈಕ, ಜಗದೀಶ್ ಪೈಕ, ಆಶ್ಲೇಷ್ ಕೆ.ಡಿ. ಹಾಗೂ ಹಲವಾರು ಗಣ್ಯರ ಉಪಸ್ಥಿತರಿದ್ದರು.