
ಪಹಲ್ಗಾಮ್ ನಲ್ಲಿ ನಡೆದಿರೋ ಭಯೋತ್ಪಾದಕ ದಾಳಿ ಅತ್ಯಂತ ಖಂಡನೀಯ. ಉಗ್ರವಾದ ಮನುಷ್ಯತ್ವದ ವಿರುದ್ದವಾದುದಾಗಿದೆ. ಉಗ್ರವಾದೀ ಮನೋಭಾವವೇ ಜಗತ್ತಿನಿಂದ ತೊಲಗಬೇಕಿದೆ. ಅದಕ್ಕಾಗಿ ಆಢಳಿ ಯಾವ ಪಕ್ಷದವರು ಮಾಡುತ್ತಿದ್ದರೂ ದೇಶದ ಪ್ರಜೆಗಳಾಗಿ ಆಢಳಿತದ ಬೆಂಬಲಕ್ಕೆ ನಿಲ್ಲಬೇಕಿರುವುದು ಪ್ರಜೆಗಳ ಕರ್ತವ್ಯ .ಹಾಗಿದ್ದರೂ ಆತ್ಮವಿಮರ್ಶೆ ಅತ್ಯಂತ ಅಗತ್ಯವಾಗಿದೆ ದೇಶದ ರಕ್ಷಣಾ ಬಜೆಟಿನ ಸಿಂಹ ಗಾತ್ರದ ಮೊತ್ತ ವ್ಯಯಿಸಲ್ಪಡುತ್ತಿರೋದು ಜಮ್ಮು ಕಾಶ್ಮಿರದಲ್ಲಾಗಿದೆ. ಬಿಜೆಪಿಯವರ ಇಂಗಿತದಂತೆ 370 ಕಾಯ್ದೆಯನ್ನು ರದ್ದುಗೊಳಿಸಿದ್ದೂ ಆಯ್ತು , ಅಚ್ಚರಿಯೇನೆಂದರೆ ನಮ್ಮೂರಿನಲ್ಲಿ ಒಂದು ಜಾತ್ರೆಯೋ ,ಕೋಲವೋ ಅಥವಾ 500-1000 ಜನ ಸೇರುವ ಕಾರ್ಯಕ್ರಮದಲ್ಲಿ ಕನಿಷ್ಠ ಹತ್ತಿಪ್ಪತ್ತು ಪೋಲೀಸರು ಇರ್ತಾರೆ. ಆದರೆ ಸುಮಾರು ಐದು ಸಾವಿರ ಪ್ರವಾಸಿಗಳು ಸೇರುವ ದೇಶದ ಅತೀಸೂಕ್ಷ್ಮ ಪ್ರದೇಶದಲ್ಲಿ ಕನಿಷ್ಟ ಒಬ್ಬ ಪೋಲೀಸೂ ಇರಲಿಲ್ಲ ಎನ್ನೋದರ ಅರ್ಥವೇನು ?ಹಾಗೇ ಕೃತ್ಯ ನಡೆದು ಅರ್ಧ ಗಂಟೆಗಳ ನಂತರ ಅಲ್ಲಿಗೆ ಸೈನಿಕರು ಬಂದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದು ಏನನ್ನು ತಿಳಿಸುತ್ತದೆ ? ಹಾಗಾದರೆ ಪಹಲ್ಗಾಮಿನಲ್ಲಿ ರಕ್ಷಣಾವ್ಯವಸ್ತೆ ಬೇಡ ಎಂದು ನಿರ್ಧರಿಸಲು ಕಾರಣವೇನು ? ಮಾತ್ರವಲ್ಲ ಸೈನಿಕರಿಗೆ ಮಾಹಿತಿ ತಿಳಿಯಲು ಅಷ್ಟು ತಡವಾಗಲು ಕಾರಣವೇನು ? ಮತ್ತು ಅವರಿಗೆ ತುರ್ತು ಸಂಚರಿಸಲು ಹೆಲಿಕಾಪ್ಟರ್ ನಂತಹಾ ವ್ಯವಸ್ತೆಗಳು ಲಭ್ಯವಿರಲಿಲ್ಲವೇ ? ಇಂತಹಾ ಅನೇಕ ಪ್ರಶ್ನೆಗಳಿಗೆ ದೇಶದ ಆಢಳಿತ ಉತ್ತರಕೊಡಬೇಕಿದೆ. ಲಕ್ಷ ಲಕ್ಷ ಕೋಟಿ ಖರ್ಚು ಮಾಡಿಯೂ ಈ ರೀತಿ ಕೃತ್ಯ ನಡೆಯಿತು ಎನ್ನೋದು ರಕ್ಷಣಾ ವೈಫಲ್ಯವಲ್ಲದೆ ಇನ್ನೇನಾಗಲು ಸಾದ್ಯ ? ಮಾತ್ರವಲ್ಲ ಜಮ್ಮು ಕಾಶ್ಮೀರದಲ್ಲಿ ಇಷ್ಟುದೊಡ್ಡ ಕೃತ್ಯನಡೆದು ಇಡೀ ದೇಶಕ್ಕೆ ದೇಶವೇ ಮರುಕಪಡುತ್ತಿರುವಾಗ ದೇಶದ ಪ್ರದಾನಿಗಳು ಘಟನೆ ಸ್ಥಳಕ್ಕೆ ಬೇಟಿ ನೀಡಿಲ್ಲ ?! ಹಾಗೇ ಸರ್ವಪಕ್ಷದ ಸಭೆ ಕರೆದಾಗ ಅದರಲ್ಲೂ ಭಾಗವಹಿಸಲಿಲ್ಲ ಯಾಕೆ ?! ಕನಿಷ್ಠ ಒಂದು ಪತ್ರಿಕಾಘೋಷ್ಟಿ ಕರೆದು ಮಾತನಾಡಿಲ್ಲ ಯಾಕೆ ?! ಬೀಹಾರದ ಚುನಾವಣಾ ಪ್ರಚಾರ ಈ ಎಲ್ಲಕ್ಕಿಂತಲೂ ಮಹತ್ವದ್ದಾಗಿತ್ತೇ ? ಜನರ ಜೀವದ ಬಗ್ಗೆಗಿನ ಕಾಳಜಿಗಿಂತಲೂ ಇವರಿಗೆ ಬಿಹಾರದ ಚುನಾವಣಾ ಭಾಷಣವೇ ದೊಡ್ಡದಾಗಿತ್ತು ಎಂದಲ್ಲವೇ ? ಈಯೆಲ್ಲಾ ಕಾರಣಗಳಿಂದ ಸಾಮಾನ್ಯ ಜನಕ್ಕೆ ಅರ್ಥವಾಗೋದು ಕೇಂದ್ರ ಸರಕಾರದ ಇಂಟೆಲಿಜೆನ್ಸ್ ವ್ಯವಸ್ಥೆ ಸಂಪೂರ್ಣ ಕುಸಿದು ದೇಶದ ರಕ್ಷಣಾ ವ್ಯವಸ್ಥೆಯನ್ನು ಕೇಂದ್ರ ಸರಕಾರ ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂದಾಗಿದೆ. ಆದ್ದರಿಂದ ಪಹಲ್ಗಾನಲ್ಲಿ ನಡೆದಿರೋದು ಕೇಂದ್ರ ಸರಕಾರದ ಸಂಪೂರ್ಣ ರಕ್ಷಣಾ ವೈಫಲ್ಯ ಎನ್ನೋದು ಮೇಲ್ನೋಟಕ್ಕೆ ಕಾಣುತ್ತಿದೆ .ಇವರಿಗೆ ದೇಶದ ಬಗ್ಗೆ ಕಾಳಜಿಯಿದ್ದರೆ ಈ ವೈಫಲ್ಯದ ಕಾರಣಕ್ಕಾಗಿ ಪ್ರದಾನಿ ಮತ್ತು ರಕ್ಷಣಾ ಸಚಿವರು ಹೊಣೆಹೊತ್ತು ಕೂಡಲೇ ರಾಜೀನಾಮೆ ನೀಡಬೇಕು, ಹಾಗೆಯೇ ಕಲಬುರ್ಗಿಯಲ್ಲಿ ರಸ್ತೆ ಮೇಲೆ ಪಾಕಿಸ್ತಾನದ ಧ್ವಜ ಅಂಟಿಸಿದ್ದು ಯಾರು ಎನ್ನೋದು ಈಗ ಸ್ಪಷ್ಟ ,ಈ ಘಟನೆಯನ್ನು ಮುಂದಿಟ್ಟು ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭಪಡೆಯಲು ಮುಂದಾದವರಿಗೂ ಉಗ್ರವಾದೀ ಕೃತ್ಯ ನಡೆಸುವಾಗ ನಿನ್ನ ಧರ್ಮ ಯಾವದೆಂದು ಕೇಳಿದವರಿಗೂ ಯಾವ ವ್ಯತ್ಯಾಸವೂ ಇಲ್ಲ ಇಬ್ಬರದೂ ಉದ್ದೇಶ ಒಂದೇ ಆಗಿತ್ತು ಭಾರತದಲ್ಲಿ ಹಿಂದೂ ಮುಸ್ಲಿ ಮತ್ತು ಇತರೇ ಧರ್ಮೀಯರು ಭಾರತೀಯರು ಎಂದು ಸಹಬಾಳ್ವೆ ನಡೆಸಬಾರದು ಎನ್ನೋದಾಗಿದೆ ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುತ್ತಾರೆ.