
ಡಿಡಿ ಚಂದನ ವಾಹಿನಿಯ ಹಲೋ ಗೆಳೆಯರೇ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪುತ್ತೂರಿನ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಯುವ ನ್ಯಾಯವಾದಿ ಹಾಗೂ ಸಂವಿದಾನ ನ್ಯಾಯ ಫೆಲೋಶಿಪ್ ಹಾಗೂ ನ್ಯಾಯಾ ಸಮಿತಿಯ ಪ್ಯಾನಲ್ ವಕೀಲಾರಾಗಿರುವ ಶ್ರೀಮತಿ ಪ್ರಿಯಾ ಮಹೇಶ್ ರವರು ಎ.24 ರಂದು ಭಾಗವಹಿಸಿದರು. ವೀಕ್ಷಕರಿಂದ ಬಂದ ಕರೆಗಳಿಗೆ ಉಚಿತ ಕಾನೂನು ಸೇವೆಗಳ ಕುರಿತು ಮಾಹಿತಿಯನ್ನು ನೀಡಿದರು. ಇವರು ಗುತ್ತಿಗಾರು ಗ್ರಾಮದ ಪೈಕ ವಾಸುದೇವ ಗೌಡ ಹಾಗೂ ಗಿರಿಜಾ ದಂಪತಿಗಳ ಪುತ್ರಿ ಹಾಗೂ ಪುತ್ತೂರು ತಾಲೂಕು ಸರ್ವೇ ಗ್ರಾಮದ ಭಕ್ತಕೋಡಿ ಮನೆ ಉದ್ಯಮಿ ಮಹೇಶ್ ರವರ ಪತ್ನಿ.