
ಭಾರತದ ಹಚ್ಚ ಹಸಿರಿನ ತಾಣ ಕಾಶ್ಮೀರದ ಪಹಲ್ಗಾಮ್ ಬಳಿ ಉಗ್ರಗಾಮಿಗಳಿಂದ ಹುತಾತ್ಮರಾದ ಪ್ರವಾಸಿಗರಿಗೆ ಸಂತಾಪ ಸೂಚಿಸಿ ಮಾತಾನಾಡಿದ ಕಲ್ಲುಗುಂಡಿ ಜುಮಾ ಮಸೀದಿಯ ಧರ್ಮ ಗುರುಗಳಾದ ಬಹು ನಾಸಿರ್ ದಾರಿಮಿ ಇಸ್ಲಾಂ ಧರ್ಮ ಯಾವತ್ತೂ ಉಗ್ರ ವಾದವನ್ನು ಬೆಂಬಲಿಸುವುದಿಲ್ಲ, ಹಾಗು ಉಗ್ರಗಾಮಿಗಳನ್ನು ಬೆಂಬಲಿಸುವುದಿಲ್ಲ . ಹುತಾತ್ಮರಾದ ಎಲ್ಲರ ಕುಟುಂಬ ವರ್ಗಕ್ಕೆ ಸಹನೆ ತಾಳ್ಮೆ ಇರಲಿ ನಾವೆಲ್ಲರೂ ಭಾರತೀಯರು ಒಂದಾಗಿ ಅವರಿಗಾಗಿ ಪ್ರಾರ್ಥಿಸೋಣ. ನಮ್ಮ ನೆಲ, ಜಲ ರಾಷ್ಟ್ರ ರಕ್ಷಣೆಗೆ ಕೈ ಜೋಡಿಸೋಣ ಎಂದು ಕರೆ ನೀಡಿದರು ಸಂತಾಪ ಹಾಗೂ ಖಂಡನಾ ಸಭೆಯಲ್ಲಿ ಜಮಯತ್ ಅಧ್ಯಕ್ಷರಾದ ಆಲಿ ಹಾಜಿ ಎಸ್. ಉಪಾಧ್ಯಕ್ಷರಾದ ಕೆ. ಎಂ. ಅಶ್ರಫ್. ಮಾಜೀ ಅಧ್ಯಕ್ಷರು ಸಮಸ್ತ ಸoಯುಕ್ತ ಜಮಯತ್ ಉಪಾಧ್ಯಕ್ಷರಾದ ಅಬ್ಬಾಸ್ ಹಾಜಿ ಸಂಟ್ಯಾರ್, ಸುಳ್ಯ ತಾಲೂಕು ಮದ್ರಸಾ ಮೇನೇಜ್ಮೆನ್ಟ್ ಅಧ್ಯಕ್ಸರಾದ ತಾಜ್ ಮಹಮ್ಮದ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ. ಮಾಜಿ ಜಮಯತ್ ಅಧ್ಯಕ್ಷರಾದ ಎಂ. ಸಿ .ಅಬೂಬಕ್ಕರ್ , ಮಾಜಿ ಕಾರ್ಯದರ್ಶಿ ರಝಾಕ್ ಸೂಪರ್, ಸಮಿತಿ ಸದಸ್ಯರುಗಳಾದ ಅಬೂಬಕ್ಕರ್ ಸೂಪರ್, . ಕೆ,ಪಿ ಮಹಮದ್ ಕಣಕೂಡ್ ರಫೀಕ್ ಪ್ರಗತಿ ಚಿಕ್ಕನ್, ಹನೀಫ್ ಕೆ. ಎಸ್. ಕಡೇಪಳ ಕಬೀರ್ ಕಡೇಪಾಲ ,ಸಾದಿಕ್ ಚಟ್ಟೆಕಲ್ಲು ಸಾಜಿದ್ ಉಸ್ತಾದ್ , ಕಲ್ಲುಗುಂಡಿ ಜುಮಾ ಮಸೀದಿಯ ಕಾರ್ಯದರ್ಶಿ ಇರ್ಷಾದ್ ಬದ್ರಿಯಾ ಪಿ ಏ ಅಮು ಬಾಲಂಬಿ, ಹಸೈನಾರ್ ಚಟ್ಟೆಕಲ್ಲು ಆಡಳಿತ ಮಂಡಳಿ ಸದಸ್ಯರ ರಫೀಕ್ ಕರಾವಳಿ ಹಸೈನಾರ್ 40 ಹಾಗೂ ಜಮಯತ್ ಸದಸ್ಯರುಗಳು ಹಾಜರಿದ್ದರು