
ಕಾಶ್ಮೀರದ ಪಹಲ್ಗಮ್ ಲ್ಲಿ ನಡೆದ ಉಗ್ರರ ಹೇಯ ಕೃತ್ಯವನ್ನು ಖಂಡಿಸುವ ವಿಚಾರದಲ್ಲಿ ಯೂ ಟ್ಯೂಬ್ ಚಾನೆಲ್ ನಿರೂಪಕರೊಬ್ಬರು ಬಿಜೆಪಿ ಪಕ್ಷದ ಬಗ್ಗೆ ಅಸಹ್ಯಕಾರ, ಕೆಟ್ಟ ಪದ ಬಳಸಿರುವುದನ್ನು ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತದೆ. ವಿಜೆ ವಿಖ್ಯಾತ್ ಬಗ್ಗೆ ನಮಗೆ ಗೌರವವಿತ್ತು.ಹಳ್ಳಿ, ಬಡತನದಿಂದ ಬಂದ ಹುಡುಗ ಏನೋ ಒಂದಷ್ಟು ಒಳ್ಳೆಯ ಕಾರ್ಯ ಮಾಡುತ್ತಿದ್ದೇನೆಂಬ ಭಾವನೆಯಿತ್ತು. ಆದರೆ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡಬೇಕು ರಾಜತಾಂತ್ರಿಕವಾಗಿ ಮಾಡಿದ್ದು ನಮಗೆಲ್ಲ ತಿಳಿದಿದೆ,ದೇಶದ ಭದ್ರತೆ ವಿಚಾರದಲ್ಲಿ ಬಿಜೆಪಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ ಆದರೆ ಕೀಳು ಮಟ್ಟದ ಮಾತು ಮೂಲಕ ಲಕ್ಷಾಂತರ ದೇವ ದುರ್ಲಭ ಕಾರ್ಯಕರ್ತರಿಗೆ ನೋವು ಮಾಡಿರುವುದನ್ನು ಪಕ್ಷ ಖಂಡಿಸುತ್ತದೆ.ಲಕ್ಷಾಂತರ ಕಾರ್ಯಕರ್ತರ ತ್ಯಾಗ,ಸಮಯದಿಂದ ಬಿಜೆಪಿ ಪಕ್ಷ ಬೆಳೆದಿದೆ ಇಂತಹ ಮಾತು ಗೆ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.