
ಕುಕ್ಕೆಸುಬ್ರಹ್ಮಣ್ಯದ ಹಿಂದೂ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ ಎ.25 ರಂದು ಕುಕ್ಕೆಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ನಿವೃತ್ತ ಅಧಿಕಾರಿ ಅಶೋಕ್ ಮೂಲೆಮಜಲು, ಉಪನ್ಯಾಸಕ ಪದ್ಮ ಕುಮಾರ್ ಗುಂಡಡ್ಕ ಘಟನೆ ಬಗ್ಗೆ ಮಾತಾಡಿದರು. ಸಂಘಟನೆಯ ಎಲ್ಲಾ ಪ್ರಮುಖರು, ಹಾಗೂ ಭಕ್ತಾದಿಗಳು, ಸುಬ್ರಹ್ಮಣ್ಯದ ವ್ಯಾಪಾರಸ್ಥರು, ಪ್ರತಿಭಟನೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದರು.