
ಮಂಗಳೂರಿನಲ್ಲಿ ನಡೆದ ಬ್ಯಾರಿ ಮೇಳ 2025ರಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರಿಂದ ಉಬೈಸ್ ಅವರಿಗೆ ಸಾಮಾಜಿಕ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಹ್ಯಾದ್ರಿ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಮಂಜುನಾಥ್ ಭಂಡಾರಿ, ನಿವೃತ್ತ ಡಿಸಿಪಿ ಜಿ.ಎ. ಬಾವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಮತ್ತು ನಸೀಮಾ ಫೌಂಡೇಶನ್ ಸ್ಥಾಪಕ ಯು.ಟಿ. ಝುಲ್ಫಿಕಾರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹಿತ ಹಲವು ಗಣ್ಯರು ಬಾಗವಹಿಸಿದರು ಉಬೈಸ್ ಯೆನೆಪೋಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹಾಗು ಕಾಲೇಜು ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದಕ್ಷಿಣ ಕನ್ನಡದ ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೂಡಾ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು. ಇತ್ತೀಚೆಗಷ್ಟೆ ಅವರು ಯೆನೆಪೋಯಾ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯಿಂದ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ ಮತ್ತು ಬಿಹಾರ ಸರಕಾರ ಆಯೋಜಿಸಿದ ಫೇಸ್ ಆಫ್ ಫ್ಯೂಚರ್ ಪ್ರತಿಷ್ಠಿತ ಸಿಲ್ವರ್ ಮೆಡಲ್, ರಾಷ್ಟ್ರೀಯ ಪ್ರೇರಣಾ ದೂತ್ ಪ್ರಶಸ್ತಿ ಮತ್ತು ಪಡೆದುಕೊಂಡಿದ್ದಾರೆ. ಉಬೈಸ್ ಪೊವ್ವಾಲ್ ಕುಟುಂಬದ ಪಿ.ಎ ಉಮ್ಮರ್ ಹಾಜಿ ಗೂನಡ್ಕ ಮತ್ತು ರುಕ್ಯ ಅವರ ಪುತ್ರರಾಗಿದ್ದ