
ಗುತ್ತಿಗಾರು ಮೆಟ್ಟಿನಡ್ಕ ಕಂದ್ರಪ್ಪಾಡಿ ದೇವ ರಸ್ತೆಯಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಎರಡು ಕಡೆ ಕಳೆದ ಅಕ್ಟೋಬರ್ ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಇದೀಗ ಮೆಟ್ಟಿನಡ್ಕ ಬಳಿ ನಿರ್ಮಿಸಿದ್ದ ರಸ್ತೆಯಲ್ಲಿ ಕಾಂಕ್ರೀಟ್ ನಿಂದ ಜಲ್ಲಿ ಮೇಲೆದ್ದು ಬರುತ್ತಿದ್ದು ಕಳಪೆಯಾಗಿದೆ. ಇದೀಗ ರಸ್ತೆ ಕಳಪೆಯಾಗಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಸರಿಪಡಿಸಲು ಆಗ್ರಹಿಸಿದ್ದಾರೆ.
ಈ ಬಗ್ಗೆ ಪಿಡ್ಬ್ಲೂಡಿ ಎಇ ಪರಮೇಶ್ವರ ಅವರನ್ನು ಸಂಪರ್ಕಿಸಿದಾಗ ರಸ್ತೆ ಕಳಪೆಯಾಗಿರುವುದು ಹೌದು, ಸರಿಪಡಿಸಲು ಹೇಳಿದ್ದೇವೆ.ನಿರ್ಮಾಣಗೊಂಡ ರಸ್ತೆಯ ಕ್ವಾಲಿಟಿ ಚೆಕ್ ಮಾಡಿಸಿ ಯಾವ ರೀತಿ ದುರಸ್ತಿ ಪಡಿಸಬೇಕು ಎಂದು ನೋಡಿಕೊಂಡು ಸರಿಪಡಿಸಲು ಗುತ್ತಿಗೆದಾರರಿಗೆ ಹೇಳಿದ್ದೇವೆ ಎಂದು ಹೇಳಿದರು.
ಗುತ್ತಿಗೆದಾರರಾದ ಇಕ್ಬಾಲ್ ಅವರನ್ನು ಸಂಪರ್ಕಿಸಿದಾಗ ಇಲ್ಲಿ ಹೊಯ್ಗೆಯ ಅಭಾವದಿಂದ ಸಮಸ್ಯೆಯಾಗಿದೆ. ಬಿಸಿ ರೋಡ್ ಮರಳು ಸಿಗದೇ ತೊಂದರೆಯಾಗಿದೆ. ರಸ್ತೆ ಬಂದ್ ಮಾಡಿ ಕೆಲಸ ಆರಂಭಿಸಿದ್ದೇವು. ಉತ್ತಮ ಹೊಯ್ಗೆ ಸಿಗದ ಅನಿವಾರ್ಯತೆಯಿಂದ ಹೀಗಾಗಿದೆ. ತಪ್ಪಾಗಿದ್ದು ಹೌದು ಎಷ್ಟೇ ಖರ್ಚಾದರೂ ಸರಿಪಡಿಸಿಕೊಡುತ್ತೇವೆ. ಸೋಮವಾರದಿಂದ ಇದರ ದುರಸ್ತಿಗೆ ಬೇಕಾದ ಕೆಲಸ ಆರಂಭಿಸುತ್ತೇವೆ. ಇಲ್ಲಿ ಮಾತ್ರ ಸಮಸ್ಯೆಯಾಗಿದೆ. ಇದೇ ಅವಧಿಯಲ್ಲಿ ದೇವದಲ್ಲಿ ನಿರ್ಮಾಣಗೊಂಡ ರಸ್ತೆ ಉತ್ತಮವಾಗಿದೆ ಎಂದಿದ್ದಾರೆ.