
ಸುಳ್ಯ ತಾಲೂಕು ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೇಸರ ಇಕೋಕ್ಲಬ್ ವತಿಯಿಂದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿಯವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು.

ಇಕೋಕ್ಲಬ್ ನ ಸುಮಾರು 35 ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ನವೀನರವರ ವಿಶಿಷ್ಟವಾದ ಮುತ್ತು ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದು, ಅವರ ಸಮಗ್ರ ಕೃಷಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಇಕೋಕ್ಲಬ್ ವತಿಯಿಂದ ನವೀನ್ ಚಾತುಬಾಯಿಯವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳೊಂದಿಗೆ ಶಾಲಾ ಮುಖ್ಯ ಗುರುಗಳಾದ ಸೂಫಿಪೆರಾಜೆ, ಶಿಕ್ಷಕ ನಾರಾಯಣ ಬೊಳ್ಳೂರು,ಎಸ್ ಡಿ ಎಂ ಸಿ ಅಧ್ಯಕ್ಷರಾದ ದಯಾನಂದ ಕಟ್ಟತ್ತಾರು ಹಾಗೂ ಉಳಿದ ಶಿಕ್ಷಕರುಗಳು ಉಪಸ್ಥಿತರಿದ್ದರು.