
ಸುಳ್ಯ ಡಾ| ಬಿ. ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯನ್ನು ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸುವ ಮೂಲಕ ಆಚರಿಸಲಾಯಿತು.
ಸಂಚಾಲಕರಾದ ಶ್ರೀ ಗೋಪಾಲ್ ಪೆರಾಜೆಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .ಪ್ರಜಾಧ್ವನಿಯ ಭಾಗವಾದ ಡಾ.ಸುಂದರ ಕೇನಾಜೆ. ಶ್ರೀ ಅಶೋಕ್ ಎಡಮಲೆ ,ಕುಮಾರಿ ಶ್ರೀಪೂರ್ಣಾ ಗಬ್ಲಡ್ಕ ,ಭರತ್ ಕುಕ್ಕುಜಡ್ಕ ಶ್ರೀಮತಿ ತಿರುಮಲೇಶ್ವರಿ ಜಾಲ್ಸೂರು, ಅವರುಗಳು ಅಂಬೇಡ್ಕರ್ ಅವರ ಬದುಕು, ಆಶಯಗಳು ಮತ್ತು ನಿಲುವುಗಳ ಬಗ್ಗೆ ಮಾತನಾಡಿದರು. ಈ ಸಭೆಯಲ್ಲಿ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕರಾದ ಶ್ರೀ ಜಾನಿ. ಕೆ.ಪಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಪಿ.ಎಸ್ ಗಂಗಾಧರ್,ಸಂಪಾಜೆ ಕೃ,ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಕೊಯಿಂಗಾಜೆ ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶ್ರೀ ಲಕ್ಷ್ಮೀಶ ಗಬ್ಲಡ್ಕ ,ಶ್ರೀ ಸುರೇಶ್ ಎಂ.ಹೆಚ್ ,ಶ್ರೀ ಧರ್ಮಪಾಲ ಕೊಯಿಂಗಾಜೆ ,ಶ್ರೀ ಮಹೇಶ್ ಬೆಳ್ಳಾರ್ಕರ್ , ಕೇಶವ ಪಾಟಾಳಿ
ಶರೀಫ್ ಕಂಠಿ,ರೈತ ಸಂಘದ ಅಧ್ಯಕ್ಷರಾದ ಶ್ರೀ ಲೋಲಜಾಕ್ಷ ಬೂತಕಲ್ಲು ,ದಿವಾಕರ ಪೈ,ಶ್ರೀಮತಿ ಯಮುನಾ ಬಿ.ಎಸ್,ಶ್ರೀಮತಿ ಅನಸೂಯಾ, ಶ್ರೀಮತಿ ಪ್ರಮಿಳಾ ಪೆಲ್ತಡ್ಕ, ಮತ್ತಿತರರು ಉಪಸ್ತಿತರಿದ್ದರು ಸಾಹುಕಾರ್ ಅಶ್ರಫ್ ಸ್ವಾಗತಿಸಿ ವಂದಿಸಿದರು.