
ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಂಜದ ವಿಜಯ ಕ್ಲಿನಿಕ್ ನ ಡಾ. ಲೀಲಾವತಿ ಇವರು ಮಕ್ಕಳ ದೈಹಿಕ ಅರೋಗ್ಯ ಮನಸ್ಸಿನ ದೃಡತೆ ಪ್ರಮುಖ ಕಾರಣ ವಾಗುತ್ತದೆ. ಶುಚ್ಚಿತ್ವದ ಅರಿವು ಏಳವೆಯಿಂದಲೇ ಮಕ್ಕಳಲ್ಲಿ ಬೆಳೆಸಲು ಇಂತಹ ಶಿಬಿರಗಳು ಪೂರಕ ಎಂದು ಅಭಿಪ್ರಯಪಟ್ಟರು. ಪೂರ್ವಹ್ನ ದ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರತಿಭಾನ್ವಿತ ಕಲಾವಿದೆ ಗುರುಪ್ರಿಯಾ ಕಾಮತ್ ಭಾಗವಹಿ ಸಿದರು.