
ವಕ್ಫ್ ಎನ್ನುವುದು ಇಸ್ಲಾಂ ಧರ್ಮೀಯರು ತಮ್ಮ ಸ್ವಂತ ಆಸ್ತಿಗಳನ್ನು ಧಾರ್ಮಿಕ ವಿಷಯಗಳಿಗೆ ದಾನ ಮಾಡುವುದಾಗಿದೆ. ಹೀಗೆ ದಾನ ಮಾಡುವ ಸ್ವತ್ತನ್ನು ವಕ್ಫ್ ಎನ್ನಲಾಗುತ್ತದೆ. ಈ ಹೆಸರಿನಲ್ಲಿ ಅಲ್ಲದಿದ್ದರೂ ಇದೇ ರೀತಿಯಲ್ಲಿ ದಾನಮಾಡುವ ಕ್ರಮ ಎಲ್ಲಾ ಧರ್ಮಗಳಲ್ಲೂ ಇದೆ.ಮತ್ತು ಇಂತಹಾ ಆಸ್ತಿಗಳು ಎಲ್ಲಾ ಧರ್ಮೀಯರ ಸಂರಕ್ಷಣೆಯಲ್ಲೂ ಇದೆ. ಇತ್ತೀಚಿಗೆ ಇಸ್ಲಾಮೋಫೋಭಿಯಾ ಎನ್ನುವ ಮಾನೋಧೌರ್ಬಲ್ಯ ಹೆಚ್ಚಾಗಿ ವ್ಯಾಪಿಸುತ್ತಿದ್ದು.ಚರಿತ್ರೆಯಲ್ಲಿ ಇಂತಹಾ ಫೋಬಿಯಾ ವಿವಿಧ ದೇಶಗಳಲ್ಲಿ ವಿವಿಧ ಸಂದರ್ಭಗಳಲ್ಲಿ ವಿವಿಧ ಜನಾಂಗಗಳ ವಿರುದ್ದ ಹರಡಲ್ಪಟ್ಟಿತ್ತು. ಈ ಫೋಬಿಯಾ ಭಾಧಿಸಿದವರಿಗೆ ಅನ್ಯ ಧರ್ಮಿಯರ ಯಾವುದೇ ಧಾರ್ಮಿಕ ಆಚರಣೆಗಳನ್ನು ಸಹಿಸಲು ಸಾದ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಕೇರಳದ ಮುನಂಬಂ ವಿಷಯವನ್ನು ಪ್ರತ್ಯೇಕವಾಗಿ ನೋಡಬೇಕಿದೆ.ಅದನ್ನು ಉಳಿದ ಎಲ್ಲಾ ವಕ್ಫ್ ಆಸ್ತಿಗಳಿಗೂ ತಳಕು ಹಾಕುವುದು ತಪ್ಪು. ಮತ್ತು ಈರೀತಿಯ ವಿಭಜನಾತ್ಮಕ ನೀತಿ ತಾಯಿ ಭಾರತಿಯ ಮಕ್ಕಳ ಮತ್ತು ಮುಂದಿನ ತಲೆಮಾರುಗಳ ನೆಮ್ಮದಿ ಮತ್ತು ಅಭಿವೃದ್ಧಿಯನ್ನು ಕಸಿಯಲು ಮಾತ್ರ ಕಾರಣವಾಗಲಿದೆ.ಶಾಂತಿ ಮತ್ತು ಸೌಹಾರ್ಧತೆಯ ಬಾಳನ್ನು ಆಗ್ರಹಿಸುವ ಭಾರತೀಯರು ಎಚ್ಚೆತ್ತುಕೊಂಡು ಇಂತಹಾ ಅಸಹಜ ನಿರ್ಧಾರಗಳ ವಿರುದ್ದ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಾಗಬೇಕು. ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ ಪತ್ರಿಕಾ ಹೇಳಿಕೆಯನ್ನು ನೀಡಿರುತ್ತಾರೆ.