
ಸುಳ್ಯದ ಅಜ್ಜಾವರದ ಚೈತನ್ಯ ಸೇವಾಶ್ರಮ ದೇವರಕಳಿಯದಲ್ಲಿ ದಿನಾಂಕ 10-04-2025 ರಂದು ನಡೆದ ಶ್ರೀ ದೇವಿ ಭಗವತಿ ಮಂದಿರದ 27 ನೇ ವರ್ಷದ ವಾರ್ಷಿಕ ಪ್ರತಿಷ್ಟಾ ಮಹೋತ್ಸವ ಮತ್ತು ಜೋಡಿ ಸಾಹಿತ್ಯ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುಳ್ಯದ ಸಾಹಿತಿ ಮತ್ತು ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ಅವರನ್ನು ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿಯವರು ಸಮ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ, ಶಂಕರ್ ಪೆರಾಜೆ, ಪ್ರಣವಿ ಎಂ, ಕೃಷಿ ಸಖಿ ಶ್ರೀಮತಿ ಮೋಹಿನಿ ವಿಶ್ವನಾಥ ಉಪಸ್ಥಿತರಿದ್ದರು.