
ಏಪ್ರಿಲ್ 9 2025
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಇಂಟರ್ ಕ್ಲಾಸ್ ಮ್ಯಾನೇಜ್ಮೆಂಟ್ ಫೆಸ್ಟ್ ಜೆನೊವೇಟ್ ನಡೆಯಿತು. ಕಾಗೊ ಇನ್ಫಿನಿಟಿ ಎಕ್ಸಿಮ್ಸ್ ನ ಸ್ಥಾಪಕಿ ಹಾಗೂ ಸಿಇಒ ಕಾವ್ಯಾ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಹೇಗೆ ಪೂರಕವಾಗಿದೆ ಎಂದು ತಿಳಿಸಿದರು. ಬಿದಿರು ಗಿಡ ಹೇಗೆ ಮರವಾಗಿ ಬೇಗ ಬೆಳೆಯುತ್ತದೆಯೋ ಹಾಗೆ ವಿದ್ಯಾರ್ಥಿಗಳ ಜ್ಞಾನ ಬೆಳೆಯಲಿ ಎಂದು ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲ ಪ್ರೊ. ಸತೀಶ್ ಕುಮಾರ್ ಕೆ ಆರ್ ಶುಭ ಹಾರೈಸಿದರು. ಐಕ್ಯೂಎಸಿ ಸಂಚಾಲಕರು ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೆ ರಾವ್ ಅತಿಥಿಗಳನ್ನು ಪರಿಚಯಿಸಿದರು. ನಿರ್ವಹಣಾ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ವೇತಾ ಎಮ್ ಹಾಗೂ ಶ್ರೀನಂದನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ದೀಕ್ಷಿತಾ ವಂದಿಸಿದರು. ಜೆನೊವೇಟ್ ಫೆಸ್ಟ್ ನ ಕಾರ್ಯದರ್ಶಿ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಬಿಬಿಎ ವಿಭಾಗದ ವತಿಯಿಂದ ಮಾರ್ಕೆಟಿಂಗ್, ಫೈನಾನ್ಸ್, ಬೆಸ್ಟ್ ಮ್ಯಾನೇಜರ್, ಎಚ್ ಆರ್, ಬ್ಯುಸಿನೆಸ್ ಕ್ವಿಜ್, ಫ್ಯೂಚರ್ ಪ್ರಾಡಕ್ಟ್, ಸೆಕ್ಟರ್ ಎನಾಲಿಸಿಸ್ ಗೆ ಸಂಬಂಧಿಸಿ ವಿವಿಧ ಸ್ಪರ್ಧೆಗಳು ನಡೆದವು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಿಬಿಎ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದರು. ಅಂತಿಮವಾಗಿ ತೃತೀಯ ಬಿಬಿಎ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ ಪಟ್ಟ ಗಳಿಸಿದರು.