
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಯವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇದರ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಗೆ ಚೆರ್ ಮೆನ್ ಆಗಿ ನೇಮಕಾವಾದ ಹಿನ್ನೆಲೆಯಲ್ಲಿ ಏ.10 ರಂದು ಸುಳ್ಯ ಶ್ರೀ ಸಾರ್ವಜನಿಕ ಶಾರದಾಂಬ ಸೇವಾ ಸಮಿತಿಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಅವರ ನಿವಾಸದಲ್ಲಿ ಸುಳ್ಯ ಶ್ರೀ ಸಾರ್ವಜನಿಕ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ಚೇತನ್ ಕಜೆಗದ್ದೆ, ಮಧುಸೂಧನ್ ಬೂಡು, ಕುಶಾಲಪ್ಪ ಬೂಡು ಭೇಟಿಯಾಗಿ ಅಭಿನಂದಿಸಿದರು.
