
ಬೆಲೆಯೇರಿಕೆಯ ವಿರುದ್ದ ಮಾತನಾಡಲು ಒಂದು ಶೇಕಡವೂ ನೈತಿಕತೆ ಉಳಿಸಿಕೊಳ್ಳದ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಆಸನ್ನವಾಗಿರುವ ಚುನಾವಣೆಗಳಲ್ಲಿ ಜನರಿಂದ ಎದುರಿಸಬೇಕಾದ ನಿಜವಾದ ಜನಾಕ್ರೋಶಕ್ಕೆ ಹೆದರಿ ಸತ್ಯ ಮುಚ್ಚಿಡಲು ಮಾಡುತ್ತಿರುವ ಕುತಂತ್ರದ ಭಾಗವಾಗಿದೆ. ಜನ ಪ್ರಭುದ್ಧರಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಬೆಲೆಯೇರಿಕೆ ಮೂಲಕಾರಣವಾದ ಡೀಸೆಲ್ ಪೆಟ್ರೋಲ್ ಮತ್ತು ಅಡುಗೆ ಅನಿಲದ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕಡಿಮೆಯಾದಾಗಲೂ ತಮ್ಮ ಕೋಟಿಪತಿ ಉಧ್ಯಮಿಗೆಳೆಯರು ಲಾಭ ಮಾಡಿಕೊಳ್ಳಲಿ ಎನ್ನುವ ಒಂದೇ ಕಾರಣಕ್ಕೆ ಸಾಮಾನ್ಯಜನರ ಬೆನ್ನಿಗೆ ಬೆಲೆಯೇರಿಕೆಯ ಬರೆಯೆಳೆದಿದೆ. ರಾಜ್ಯದ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದು ಸತ್ಯವು ಹೀಗಿದೆ. 2014 ರ ಮೊದಲು ಡಾಕ್ಟರ್ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಒಂದು ಬ್ಯಾರೆಲ್ ಕಚ್ಛಾತೈಲದ ಬೆಲೆ 6652 ರುಪಾಯಿ ಇತ್ತು . ಅವಾಗ ದೇಶದ ಜನರಿಗೆ ಪೆಟ್ರೋಲ್ ಲೀಟರಿಗೆ 66 ರುಪಾಯಿ ಡೀಸೆಲ್ 52 ರುಪಾಯಿಗೆ ದಕ್ಕುವಂತೆ ಮಾಡಲಾಯಿತು. ಆದರೆ ಈಗ 2025 ರ ಮಾರ್ಚ್ ಅವಧಿಗೆ ಕಛ್ಛಾತೈಲದ ಬೆಲೆ ಬ್ಯಾರೆಲ್ ಗೆ ಅಂದಿಗಿಂತ 1000 ರದಷ್ಟು ಕಡಿಮೆ ಇದ್ದರೂ ,
ಜನರಿಗೆ ಪೆಟ್ರೋಲ್ ಸಿಗಬೇಕಿದ್ರೆ ಲೀಟರಿಗೆ 100 ಕ್ಕಿಂತ ಮೇಲೆ ಪಾವತಿಸಬೇಕು .ಸಾಮಾನ್ಯವಾಗಿ ಡೀಸೆಲ್ ಪೆಟ್ರೋಲ್ ,ಗ್ಯಾಸ್ ಬೆಲೆ ಏರಿಕೆ ಆದಾಗ ಎಲ್ಲಾ ನಿತ್ಯೋಪಯೋಗಿ ವಸ್ತುಗಳ ಬೆಲೆಯೂ ಏರಿಕೆಯಾಗುವುದು ಸಹಜ .ಆದ್ದರಿಂದ ಇಂದಿನ ಬೆಕೆಯೇರಿಕೆಗೆ ನೇರವಾಗಿ ಕಾರ್ಪೊರೇಟ್ ಮಾಲೀಕರ ಸಂಪತ್ತು ಏರಿಸುವ ಕೆಲಸವನ್ನೇ ಮೂಲ ಮಂತ್ರವನ್ನಾಗಿಸಿದ ಕೇಂದ್ರ ಬಿಜೆಪಿ ಸರಕಾರದ ಬೆಲೆ ನಿಯಂತ್ರಣವಿಲ್ಲದ ಆಢಳಿತ ಪಾಲಿಸಿಯೇ ಕಾರಣ. ಬಿಜೆಪಿ ಮತ್ತು ಪಾಲುದಾರ ಪಕ್ಷಗಳು ಆಢಳಿತಮಾಡುತ್ತಿರೋ ಈ ಕೆಳಗಿನ ರಾಜ್ಯಗಳಲ್ಲಿನ ಇಂಧನ ದರಗಳೇ ಅದಕ್ಕೆ ಉದಾಹರಣೆ ಮಧ್ಯಪ್ರದೇಶದಲ್ಲಿ ಪೆಟ್ರೋಲ್ ದರ 106.22 ಡೀಸೆಲ್ ದರ 92.27
ಮಹಾರಾಷ್ಟ್ರ ಪೆಟ್ರೋಲ್ ದರ 105.28 ಡೀಸೆಲ್ ದರ 91.03
ರಾಜಸ್ಥಾನದಲ್ಲಿ ಪೆಟ್ರೋಲ್ ದರ 105.67 ಡೀಸೆಲ್ ದರ 91.07
ಆಂದ್ರಪ್ರದೇಶದಲ್ಲಿ ಪೆಟ್ರೋಲ್ ದರ 108.45 ಡೀಸೆಲ್ ದರ 97.62
ಬಿಹಾರದಲ್ಲಿ ಪೆಟ್ರೋಲ್ ದರ 106.93 ಡೀಸೆಲ್ ದರ 93.79
ಗುಜರಾತಿನಲ್ಲಿಯೂ ಡೀಸೆಲ್ ದರ 90.81 ಪೈಸೆಯಿದೆ ವಿಷಯ ಹೀಗೆಲ್ಲಾ ಇರುವಾಗ ಬಿಜೆಪಿಯವರ ಎಷ್ಟು ಜನಾಕ್ರೋಶ ಯಾತ್ರೆ ಇಲ್ಲೆಲ್ಲಾ ಕೈಗೊಂಡಿದ್ದಾರೆ.? ಸಮರ್ಥನೀಯವಲ್ಲದ ಇಂತಹಾ ನಾಟಕಗಳನ್ನು ಬಿಜೆಪಿ ಕೈಬಿಟ್ಟು ಜನಪರವಾದ ಕಾರ್ಯಕ್ರಮಗಳ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಿ. ಕಾಂಗ್ರೆಸ್ ಹಿಂದಿನಿಂದಲೂ ದೇಶದ ಜನರ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿದೆ.ಅದರಂತೆ ರಾಜ್ಯದ ಸಿದ್ದರಾಮಯ್ಯ ಸರಕಾರ ಜನರಿಗೆ ಐದು ಗ್ಯಾರೆಂಟಿಗಳ ಮುಲಕ ನರೇಂದ್ರ ಮೋದಿ ಸರಕಾರ ಅನ್ಯಾಯವಾಗಿ ತೆರಿಗೆಯ ರೂಪದಲ್ಲಿ ಜನರಿಂದ ಕಿತ್ತುಕೊಂಡ ಹಣವನ್ನು ಮರಳಿ ಅವರ ಜೇಬಿಗೆ ತುಂಬಿಸುವ ಕೆಲಸ ಮಾಡಿದೆ .ಹಾಗೊಂದು ವೇಳೆ ಗ್ಯಾರೆಂಟಿ ಯೋಜನೆಗಳು ಸರಿಯಾದ ಯೋಜನೆ ಅಲ್ಲದಿದ್ದರೆ ರಾಜ್ಯದ ಬಿಜೆಪಿಯವರು ಅದನ್ನು ಸ್ವೀಕರಿಸೋದು ನಿಲ್ಲಿಸಲು ಆಂದೋಲನ ನಡೆಸಲಿ. ಎಂದು ಕೆ.ಪಿ.ಸಿ.ಸಿ.ಸಿ.ಮುಖ್ಯ ಸಂಯೋಜಕರಾದ ಜಾನಿ ಕೆ.ಪಿಯವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿರುತ್ತಾರೆ.