
ಬೆಳ್ಳಿಹಬ್ಬ ಆಚರಣಾ ಸಮಿತಿ ಮಾನಸ ಮಹಿಳಾ ಮಂಡಲ (ರಿ )ಜಟ್ಟಿಪಳ್ಳ ಇದರ ಆಶ್ರಯ ದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ಜಟ್ಟಿಪಳ್ಳದಲ್ಲಿ ಮಹಿಳಾ ಮಂಡಲ ದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಅಲೆಟ್ಟಿ ಸರಕಾರಿ ಪ್ರೌಢಶಾಲೆ ಯ ಮುಖ್ಯ್ಯೊಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಇವರು ಕಾರ್ಯಕ್ರಮ ವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.ಅತಿಥಿ ಗಳಾಗಿ ನಗರ ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತಡ್ಕ ಮತ್ತು ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಜೆ. ರೈ ಯವರು ಸಂದರ್ಬೋಚಿತವಾಗಿ ಮಾತನಾಡಿದರು. ಮಹಿಳಾ ಮಂಡಲದ ಗೌರವ ಸಲಹೆಗರರಾದ ಶ್ರೀ ದಿನೇಶ್ ಮಡಪ್ಪಾಡಿ, ಶ್ರೀ ರಘುನಾಥ ಜಟ್ಟಿಪಳ್ಳ, ಶ್ರೀ ಕುಲದೀಪ್ ಪೆಲತಡ್ಕ, ಶ್ರೀ ಸಂತೋಷ ಕುಮಾರ್ ಶೆಟ್ಟಿ ಸಹಕರಿಸಿದರು. ಶ್ರೀಮತಿ ಜಯಂತಿ ಆರ್ ರೈ ಪ್ರಾರ್ಥಿಸಿದರು. ಶ್ರೀಮತಿ ಸವಿತಾ ಲಕ್ಷ್ಮಣ್ ಎಲ್ಲರನ್ನು ಸ್ವಾಗತಿಸಿದರು. ಬೆಳ್ಳಿಹಬ್ಬ ಸಮಿತಿ ಕಾರ್ಯದರ್ಶಿ ಶ್ರೀಮತಿ ಸುನೀತಾ ರಾಮಚಂದ್ರ ವಂದಿಸಿದರು. ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಿಳಾ ಮಂಡಲ ಮತ್ತು ಯುವಕ ಮಂಡಲದ ಸದಸ್ಯರಿಗೆ ಬೆಳ್ಳಿಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆ ಗಳು ನಡೆದವು.