Ad Widget

ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಭೇಟಿ ; ವಿವಿಧ ಕಾರ್ಯಕ್ರಮ

. . . . . . . . .

ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮವು ಇತ್ತೀಚೆಗೆ ಗುತ್ತಿಗಾರು ಲಯನ್ಸ್ ಸಭಾಭವನದಲ್ಲಿ ನಡೆಯಿತು.
ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ಕುಶಾಲಪ್ಪ ತುಂಬತ್ತಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂತೀಯ ಅಧ್ಯಕ್ಷರಾದ ಲ| ಗಂಗಾಧರ ರೈ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಲ| ಸನತ್ ಮುಳುಗಾಡು ಹಾಗೂ ಸರೋಜಿನಿ ಗಂಗಯ್ಯ ಮುಳುಗಾಡು ಇವರಿಂದ ನೆರಳಾಡಿ ದೈವಸ್ಥಾನಕ್ಕೆ ಊಟದ ತಟ್ಟೆ ಕೊಡುಗೆ, ಲ| ನಿತ್ಯಾನಂದ ಮುಂಡೋಡಿ, ಲ| ಪಿ.ಸಿ ಜಯರಾಮ್, ಲ| ಕುಶಾಲಪ್ಪ ತುಂಬತ್ತಾಜೆ, ಲ| ಲೋಕಪ್ಪ ಶೀರಡ್ಕ, ಲ| ಆನಂದ ಅಂಬೆಕಲ್ಲು ಅವರಿಂದ ಮಡಪ್ಪಾಡಿ ಸ.ಹಿ.ಪ್ರಾ ಶಾಲೆಗೆ ಊಟದ ತಟ್ಟೆ ಕೊಡುಗೆ, ಲ| ವಿಜಯಕುಮಾರ್.ಎಂ.ಡಿ ಅವರಿಂದ ಬೆಂಡೋಡಿ ಅಂಗನವಾಡಿ ಶಾಲೆಗೆ ಗೋದ್ರೇಜ್ ಕೊಡುಗೆ, ಪಾಶ್ವವಾಯು ವಿನಿಂದ ಬಳಲುತ್ತಿರುವ ದೇವಿಕಾ ಗುತ್ತಿಗಾರು ಇವರಿಗೆ ಧನ ಸಹಾಯ ಹಾಗೂ ಲ| ಸರೋಜಿನಿ ಗಂಗಯ್ಯ ಅವರಿಂದ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಧನಸಹಾಯ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಲ| ರೇಣುಕಾ ಸದಾನಂದ, ಜಾಕೆ ವಲಯ ಅಧ್ಯಕ್ಷರಾದ ರೂಪಾಶ್ರೀ.ಜೆ ರೈ ಹಾಗೂ ಅಮೃತ ಅಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಲ| ಬಿಟ್ಟಿ ನಿಡುನೀಲಂ ಸ್ವಾಗತಿಸಿ ವೆಂಕಪ್ಪ ಕೇನಾಜೆ ವರದಿ ವಾಚಿಸಿದರು, ಲ| ಪುರುಷೋತ್ತಮ ಮಣಿಯಾನ ಧನ್ಯವಾದ ಸಮರ್ಪಣೆ ಮಾಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!