
ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಸುಳ್ಯ ಇದು 2023ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2024-25 ನೇ ಸಾಲಿನ ಆರ್ಥಿಕ ವರ್ಷವೂ ಸಹಕಾರಿಗೆ ಪೂರ್ಣವಾಗಿ ವ್ಯವಹರಿಸಲು ದೊರಕಿದ ಪ್ರಥಮ ಆರ್ಥಿಕ ವರ್ಷವಾಗಿದ್ದು ಈ ಅವಧಿಯಲ್ಲಿ ಸದಸ್ಯರ ಸಹಕಾರದೊಂದಿಗೆ ರೂ. 19.22 ಕೋಟಿ ವ್ಯವಹಾರ ನಡೆಸಿ ರೂ. 6.51 ಲಕ್ಷ ಲಾಭಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಬಿಳಿಮಲೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
31.03.2025ಕ್ಕೆ ಸಂಘದಲ್ಲಿ ಒಟ್ಟು 836 ಜನ ಸದಸ್ಯರಿದ್ದು ರೂ. 8.35 ಲಕ್ಷ ಪಾಲು ಬಂಡವಾಳ ಹೊಂದಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ. 71 ರಷ್ಟು ಹೆಚ್ಚಳವಾಗಿದೆ ಸಂಘವು ರೂ. 2.12 ಕೋಟಿ ಠೇವಣಿಯನ್ನು ಹೊಂದಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ.52 ರಷ್ಟು ಪ್ರಗತಿ ಸಾಧಿಸಲಾಗಿದೆ. ರೂ. 2.03 ಕೋಟಿ ಹೊರಬಾಕಿ ಸಾಲ ಇದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 49 ರಷ್ಟು ಹೆಚ್ಚಳವಾಗಿದೆ ಅಲ್ಲದೆ ಸಾಲ ಮರುಪಾವತಿಯಲ್ಲಿ ಶೇ. 99.20 ರಷ್ಟು ಉತ್ತಮ ಪ್ರಗತಿ ದಾಖಲಿಸಿರುತ್ತೇವೆ. ಸಂಘವು ರೂ. 2.19 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸಂಘದಲ್ಲಿ ಪ್ರಸ್ತುತ ಎರಡು ಜನ ಸ್ವರ್ಣ ದಿನ ಸಂಗ್ರಾಹಕರಿದ್ದಾರೆ. ಸಹಕಾರಿಯು ಎರಡನೇ ಹೆಜ್ಜೆಯನ್ನು ನಡೆಯುತ್ತಿರುವ ಈ ಸಂದರ್ಭದಲ್ಲಿ 2024 25 ನೇ ಸಾಲಿನ ಆರ್ಥಿಕ ವ್ಯವಹಾರವನ್ನು ಯಶಸ್ವಿಯಾಗಿ ಮುಗಿಸಿ 2025-26 ನೇ ಸಾಲಿನತ್ತ ಮುಂದಡಿ ಇಡುತ್ತಿರುವ ಈ ಸಂದರ್ಭದಲ್ಲಿ ಸಹಕಾರಿಯ ಸಾಧನೆಗೆ ಸಹಕರಿಸುತ್ತಿರುವ, ಬೆಂಬಲಿಸುತ್ತಿರುವ, ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಕೃತಜ್ನತೆಗಳನ್ನು ಅರ್ಪಿಸುತ್ತಾ ಮುಂದೆಯೂ ತಮ್ಮಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ.