ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ದಿನಾಂಕ : 01/03/2024 ರಂದು ಹರಿಶ್ಚಂದ್ರ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಅವಿನಾಶ್ ಬಸ್ ಬಸ್ಸನ್ನು ದುಡುಕುತನ ಮತ್ತು ಅಜಾರುಕತೆಯಿಂದ ಚಲಾಯಿಸಿಕೊಂಡು ಹೋಗಿ, ಅದೇ ಮಾರ್ಗವಾಗಿ ಪದ್ಮನಾಭ ರವರು ಚಲಾಯಿಸಿಕೊಂಡು ಹೋಗುತ್ತಿರುವ ಮೋಟಾರ್ ಸೈಕಲ್ ಗೆ ಓವರ್ ಟೆಕ್ ಮಾಡುವ ಬರದಲ್ಲಿ ಆರೋಪಿತನು ತನ್ನ ಬಸ್ಸನ್ನು ಎಡಬದಿಗೆ ಒಮ್ಮೆಗೆ ಚಲಾಯಿಸಿದ ಪರಿಣಾಮ ಬಸ್ಸಿನ ಹಿಂಬದಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿದ್ದು ಮೋಟಾರ್ ಸೈಕಲ್ ಸವಾರ ಪದ್ಮನಾಭ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದರು. ಇದರ ಪರಿಣಾಮ ಗಂಭೀರ ಗಾಯಗೊಂಡ ಪದ್ಮನಾಭ ರವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಈ ಹಿನ್ನಲೆಯಲ್ಲಿ ಆರೋಪಿ ಹರಿಶ್ಚಂದ್ರ ರವರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 279,304(A) ಯಂತೆ ಪ್ರಕರಣ ದಾಖಲಿಸಿ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯಕ್ಕೆ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿಯನ್ನು ಆಗಿನ ಪೊಲೀಸ್ ಉಪನಿರೀಕ್ಷಕರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಮಾನ್ಯ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯ ಇದರ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಯಾದ ಶ್ರೀ ಬಿ.ಮೋಹನ್ ಬಾಬು ರವರು ಪ್ರಕರಣವನ್ನು ಸಾಭಿತು ಪಡಿಸಲು ಅಭಿಯೋಜನೆಯು ವಿಫಲ ಗೊಂಡಿದೆ ಎಂದು ಅಭಿಪ್ರಾಯಿಸಿ ಆರೋಪಿಯನ್ನು ನಿರ್ದೋಶಿ ಎಂದು ದಿನಾಂಕ : 27/03/2025 ರಂದು ತೀರ್ಪು ನೀಡಿ ಬಿಡುಗಡೆಗೆ ಆದೇಶಿಸಿದ್ದಾರೆ . ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್.ಕೆ ವಾದಿಸಿದ್ದರು.
- Friday
- April 4th, 2025