
ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳು ಬಾಳಿಲದಲ್ಲಿ ಏಳು ದಿನಗಳ ಬೇಸಿಗೆ ಶಿಬಿರ ‘ರಂಗ ತರಂಗ’ ಎ. 01ರಂದು ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ) ಬಾಳಿಲ ಇದರ ಅಧ್ಯಕ್ಷರಾಗಿರುವ ಶ್ರೀ ರಾಧಾಕೃಷ್ಣ ರಾವ್ ಯು ವಹಿಸಿದ್ದರು. “ಇನ್ನಷ್ಟು ಹೊಸತನ ಬರಲಿ. ರಂಗ ತರಂಗ ಅಲೆ ಅಲೆಯಾಗಿ ಸಾಗಲಿ ….” ಎಂದು ಶುಭಹಾರೈಸಿದರು.
ಪಿ. ಜಿ. ಎಸ್. ಎನ್. ಪ್ರಸಾದ್, ಸಂಚಾಲಕರು , ಕಾರ್ಯಕ್ರಮವನ್ನು
ದೀಪ ಬೆಳಗಿಸಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ
ಕೋರಿದರು. ವೇದಿಕೆಯಲ್ಲಿ ಕೈಂತಜೆ ರಾಮಭಟ್ ಕೋಶಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸಚಿನ್ ಶರ್ಮಾ ಗಾಯಕರು ಮತ್ತು ಉದಯ ಭಾಸ್ಕರ್, ಸಂಗೀತ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳು ಬಾಳಿಲ ಇದರ ನೂತನ ಮುಖ್ಯೋಪಾಧ್ಯಾಯರಾದ ಉದಯಕುಮಾರ್ ರೈ ಎಸ್, ಸ್ವಾಗತಿಸಿದ ಕಾರ್ಯಕ್ರಮವನ್ನು ಸಹಶಿಕ್ಷಕಿ ಶುಭಾ.ಡಿ ವಂದಿಸಿದರು. ಸಹಶಿಕ್ಷಕಿ ಸಹನಾ ಬಿ ಬಿ ನಿರೂಪಿಸಿದರು.
ಏಳು ದಿನಗಳಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳ ಮೂಲಕ ಭಾಷಣ ಕಲೆ, ನಿರೂಪಣೆ, ಸಾಹಿತ್ಯ, ಮುಖವರ್ಣಿಕೆ, ಮುಖವಾಡ ತಯಾರಿ, ರಂಗತರಬೇತಿ, ಕ್ರಾಪ್ಟ್, ವ್ಯಕ್ತಿ ವಿಕಸನ, ನಾಯಕತ್ವ ,ಮಕ್ಕಳ ಜಾತ್ರೆ, ಹೊರ ಸಂಚಾರ ಮುಂತಾದ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.